ನಮ್ಮ ಬಗ್ಗೆ

ದೃಷ್ಟಿಕೋನ

ನಮ್ಮ ಸಮಾಜ, ಕನಾðಟಕ, ಭಾರತ ಮತ್ತು ವಿಶ್ವದ ಸವಾðಗೀಣ ಅಭಿವೃದ್ಧಿಗೆ ಪೂರಕವಾಗುವಂತೆ ಯುವ ಜನರನ್ನು ಪ್ರೇರೇಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಕಾರ್ಯ ಬದ್ಧತೆ

ಕನಾðಟಕದ ಯುವಜನರಿಗಾಗಿ ಉತ್ತಮ, ಉಜ್ವಲ, ನ್ಯಾಯಯುತ, ಶೋಭಾಯಮಾನವಾದ ನಾಳೆಗಳನ್ನು ಸೃಷ್ಠಿಸುವುದು.

ಇತಿಹಾಸ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ ಕೌನ್ಸಿಲ್ ನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಡಾರಜನೀಶ್ ಗೋಯೆಲ್, ಭಾ.ಆ.ಸೇ

ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಅನುಪಮ್ ಅಗರ್ವಾಲ್  ಭಾ.ಪೊ.ಸೇ

ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

Feedback