ನಗದು ಪುರಸ್ಕಾರ

ಸರ್ಕಾರದ ಆದೇಶ ಸಂ:ಯುಸೇಇ/278/ಯುಸೇಕ್ರೀ/2013 ದಿನಾಂಕ: 30.11.2013 ಮತ್ತು ಸರ್ಕಾರದ ಆದೇಶ ಸಂ: ಯುಸೇಇ/450/ಯುಸೇಕ್ರೀ/2014 ದಿನಾಂಕ:15.10.2014 ನಗದು ಪುರಸ್ಕಾರ ರಾಷ್ಟ್ರೀಯ ಮಟ್ಟದಲ್ಲಿ  ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿತಂದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸುವ ಸಲುವಾಗಿ ಏಕ ರೀತಿಯ ಪುರಸ್ಕಾರ ನೀಡುವ ಮಾದರಿಯಲ್ಲಿಯೇ ಈ ನಗದು ಬಹುಮಾನವನ್ನು ಮಾರ್ಗಸೂಚಿಗಳನ್ವಯ ನಿಗಧಿಪಡಿಸಲಾಗಿದೆ.
ಕ್ರ.ಸಂ ವಿವರ ಚಿನ್ನ(ರೂ.ಲಕ್ಷಗಳಲ್ಲಿ) ಬೆಳ್ಳಿ(ರೂ.ಲಕ್ಷಗಳಲ್ಲಿ) ಕಂಚು(ರೂ.ಲಕ್ಷಗಳಲ್ಲಿ)
1 ಒಲಂಪಿಕ್ 100.00 50.00 25.00
2 ವರ್ಲ್ಡ್ ಕಪ್ 50.00 25.00 10.00
3 ವಿಶ್ವ ಚಾಪಿಯನ್ ಷಿಪ್ ಕ್ರೀಡಾಕೂಟಗಳು(ವರ್ಲ್ಡ್ ಚಾಂಪಿಯನ್ ಷಿಪ್) ಏಷಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳು 25.00 15.00 8.00
4 ಏಷ್ಯನ್ ಚಾಂಪಿಯನ್ ಷಿಪ್ 10.00 7.00 5.00
5 ಕಿರಿಯರ ಕಾಮನ್ ವೆಲ್ತ್ 15.00 10.00 5.00
6 ಎಸ್.ಎ.ಎ.ಆರ್.ಸಿ/ಎಸ್ ಎಎಎಪ್ 4.00 2.00 1.00
7 ನ್ಯಾಷನಲ್ ಚಾಂಪಿಯನ್ ಷಿಪ್ ಇಂಟರ್ ಸ್ಟೇಟ್, ಇಂಟರ್ ಜೋನಲ್ ಮತ್ತು  ಫೆಡರೇಷನ್ ಕಪ್ 2.00 1.00 0.50
8 ಜೂನಿಯರ್ ನ್ಯಾಷನಲ್ 0.50 0.25 0.15
9 ಸಬ್ ಜೂನಿಯರ್ ನ್ಯಾಷನಲ್ 0.25 0.15 0.10
  ಮಾರ್ಗಸೂಚಿಗಳು:
 1. ಈ ವಿಶೇಷ ನಗದು ಪುರಸ್ಕಾರವನ್ನು (ವಿಶೇಷ ನಗದು ಪ್ರೋತ್ಸಾಹ) ಕರ್ನಾಟಕ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು.
 2. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾರತ ಸರ್ಕಾರದಿಂದ ಅಂಗೀಕೃತವಾದಂತಹ ರಾಷ್ಟ್ರೀಯ ಕ್ರೀಡಾ ತಂಡಗಳಿಗೆ ಆಯ್ಕೆಯಾಗಿ ಅಂತರರಾಷ್ಟ್ರೀಯ ಕ್ರೀಡಾಕೂಟ/ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು
 3. ಕ್ರೀಡಾಪಟುಗಳು ಕರ್ನಾಟಕದ ಮೂಲದವರಾಗಿದ್ದು, ರಾಜ್ಯದ ಹೊರಗಡೆ ವಾಸಿಸುತ್ತಿರುವ ಬೇರೆ ರಾಜ್ಯ ಅಥಾವಾ ಕ್ರೀಡಾ ತಂಡಗಳನ್ನು(Services, Airlines, Railways Invitation Tournament)ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 4. ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಕ್ರೀಡಾಪಟು ಯಾವ ರಾಜ್ಯವನ್ನು ಅಥಾವಾ ಯಾವ ಸಂಸ್ಥೆಯನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ ಎಂಬುದರ ಬಗ್ಗೆ ಭಾರತ ಸರ್ಕಾರದ  ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಪೇಡರೇಷನನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ದೃಢೀಕರಣ ಪತ್ರ ಒದಗಿಸಬೇಕು.
 5. ಅಂತರರಾಷ್ಟ್ರೀಯ ಆಹ್ವಾನ ಕ್ರೀಡಾಕೂಟಗಳಲ್ಲಿ() ಭಾಗವಹಿಸಿದ ಕ್ರೀಡಾಪಟುಗಳು ಈ ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 6. ಯಾವುದೇ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ದೆಯಲ್ಲಿ ನೇರ ಪ್ರವೇಶ ಪಡೆದಂತಹ ಕ್ರೀಡಾಪಟುಗಳಿಗೆ ಈ ಪುರಸ್ಕಾರಕ್ಕೆ ಅವಕಾಶವಿರುವುದಿಲ್ಲ.
 7. ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಇತರೆ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಪಿಯನ್ ಷಿಪ್ ಗಳಿಗೆ ಮಾತ್ರ ನಗದು ಪುರಸ್ಕಾರ ನೀಡಲಾಗುವುದು.(ಅಂತರರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಮಾನ್ಯತೆ ಪಡೆಯದೇ ಇರುವ ಯಾವುದೇ ಫಡೆರೇಶನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.)
 8. ಈ ವಿಶೇಷ ನಗದು ಪುರಸ್ಕಾರರವನ್ನು ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ನೆಡೆದ ಪಂದ್ಯಾವಳಿಗಳ ಸಾಧನೆಯನ್ನು ಪರಿಶೀಲಿಸಿ ಮಾರ್ಚ್ ಮಾಹೆಯಲ್ಲಿ ಪುರಸ್ಕಾರಿಸಲಾಗುವುದು.
 9. ಆ ರೀತಿ ಭಾಗವಹಿಸಿದ ಕ್ರೀಡಾಪಟುಗಳು ರಾಜ್ಯ ಕ್ರೀಡಾ ಸಂಸ್ಥೆಯ ಮುಖಾಂತರ ದೃಢೀಕರಣದೊಂದಿಗೆ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ.
 10. ಅಂತರರಾಷ್ಟ್ರೀಯ ವೆಟರನ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 11. ವಿಶೇಷ ನಗದು ಪುರಸ್ಕಾರಕ್ಕೆ ಪರಿಗಣಿಸಬೇಕಾದ ಕ್ರೀಡಾ ಚಾಂಪಿಯನ್ ಷಿಪ್ ಗಳು:
 12. ಒಲಂಪಿಕ್
 13. ವರ್ಲ್ಡ್ ಕಪ್
 14. ಕಾಮನ್ ವೆಲ್ತ್
 15. ಏಷ್ಯನ್ ಚಾಂಪಿಯನ್ ಷಿಪ್/ ಏಷ್ಯನ್ ಗೇಮ್ಸ್
 16. ಕಿರಿಯರ ಕಾಮನ್ ವೆಲ್ತ್
 17. ಸಾರ್ಕ್/ಸಾಪ್
ರಾಜ್ಯದ ಕ್ರೀಡಾಪಟುಗಳು ಅಧಿಕೃತವಾಗಿ ಭಾರತವನ್ನು ಪ್ರತಿನಿಧಿಸಿ ಅಂತರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ರೂ.50,000/- ಗಳ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ಸಾಮಾನ್ಯ ಕ್ರೀಡಾಕೂಟಗಳ ತುಲನೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುವ ವಿಕಲಚೇತನ ಕ್ರೀಡಾಕೂಟಗಳ ಸಂಖ್ಯೆ ಮತ್ತು ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಿದ್ದು, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ವಿಕಲಚೇತನ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನಗದು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸುವ ಸಲುವಾಗಿ ಈ ಕೆಳಗಿನಂತೆ ನಗದು ಬಹುಮಾನವನ್ನು ಅನುಬಂಧದಲ್ಲಿ ನಮೂದಿಸಿರುವ ಮಾರ್ಗಸೂಚಿಗಳನ್ವಯ ನಿಗಧೀಪಡಿಸಲಾಗಿದೆ.  
ಕ್ರ.ಸಂ ವಿವರ ಚಿನ್ನ(ರೂ.ಲಕ್ಷಗಳಲ್ಲಿ) ಬೆಳ್ಳಿ(ರೂ.ಲಕ್ಷಗಳಲ್ಲಿ) ಕಂಚು(ರೂ.ಲಕ್ಷಗಳಲ್ಲಿ)
1 ಪ್ಯಾರಾ ಒಲಂಪಿಕ್/ಕಾಮನ್ ವೆಲ್ತ್ 25.00 15.00 10.00
2 ಐವಾಸ್/ವಿಕಲಚೇತನರ/ಕುಬ್ಜರ ವರ್ಲ್ಡ್ ಕಪ್-ವರ್ಲ್ಡ್ ಗೇಮ್ಸ್ 10.00 7.00 5.00
3 ಪ್ಯಾರಾ ಏಷ್ಯನ್ ಗೇಮ್ಸ್/ಏಷ್ಯನ್ ಚಾಪಿಯನ್ ಷಿಪ್ಸ್ 5.00 3.00 1.50
4 ಅಂತರ್ ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್ 4.00 2.00 1.00
5 ನ್ಯಾಷನಲ್ ಗೇಮ್ಸ್ ಫಾರ್ ಡಿಸೇಬಲ್ಡ್ 2.00 1.00 0.50
6 ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್ 1.00 0.50 0.25
  ಸರ್ಕಾರದ ಆದೇಶ ಸಂ:ಯುಸೇಇ/278/ಯುಸೇಕ್ರೀ/2013 ದಿನಾಂಕ 30.11.2013ರ ಮಾರ್ಗಸೂಚಿಗಳು:
 • ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಕಲಚೇತನ ಕ್ರೀಡಾಪಟುಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.
 • ಭಾರತ ಸರ್ಕಾರದಿಂದ ಅಂಗೀಕೃತವಾದಂತಹ ರಾಷ್ಟ್ರೀಯ ಕ್ರೀಡಾ ತಂಡಗಳಿಗೆ ಆಯ್ಕೆಯಾಗಿ ಅಂತರ್ ರಾಷ್ಟ್ರೀಯ ಕ್ರೀಡಾಕೂಟ/ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಕರ್ನಾಟಕದ ವಿಕಲಚೇತನ ಕ್ರೀಡಾಪಟುಗಳಿಗೆ ಮಾತ್ರ ನೀಡತಕ್ಕದ್ದು
 • ಕ್ರೀಡಾಪಟುಗಳು ಕರ್ಮಾಟದ ಮೂಲದವರಾಗಿದ್ದು, ಬೇರೆ ರಾಜ್ಯ ಅಥಾವಾ ಕ್ರೀಡಾ ತಂಡಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಈ ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಆಹ್ವಾನ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿಕಲಚೇತನ ಕ್ರೀಡಾಪಟುಗಳು ಈ ವಿಶೇಷ ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ವಿಕಲಚೇತನ ಕ್ರೀಡಾಪಟು ಯಾವ ರಾಜ್ಯವನ್ನು ಅಥಾವಾ ಯಾವ ಸಂಸ್ಥೆಯನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದಾರೆ ಎಂಬುದರರ ಬಗ್ಗೆ ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ದೃಢೀಕರಣ ಪತ್ರ ಒದಗಿಸಬೇಕು.
 • ಯಾವುದೇ ಅಂತರ್ ರಾಷ್ಟ್ರೀಯ/ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ನೇರ ಪ್ರವೇಶ ಪಡೆದಂತಹ ವಿಕಲಚೇತನ ಕ್ರೀಡಾಪಟುಗಳಿಗೆ ಈ ಪುರಸ್ಕಾರಕ್ಕೆ ಅವಕಾಶವಿರುವುದಿಲ್ಲ.
 • ಅಂತರ್ ರಾಷ್ಟ್ರೀಯ ಸಂಸ್ಥೆ ಮತ್ತು ಇತರೆ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ನಡೆಸುವ ಅಧಿಕೃತ ಚಾಂಪಿಯನ್ ಷಿಪ್ ಗಳಿಗೆ ಮಾತ್ರ ನಗದು ಪುರಸ್ಕಾರ ನೀಡಲಾಗುವುದು. ಕರ್ನಾಟಕ ರಾಜ್ಯ ಹಾಗೂ ಭಾರತ ಸರ್ಕಾರದ ಮಾನ್ಯತೆ ಪಡೆಯದೇ ಇರುವ ಯಾವುದೇ ಪೇಡರೇಷನ್ ನಡೆಸುವ ಕ್ರೀಡೆಗಳಲ್ಲಿ ಭಾಗವಹಿಸಿದ ವಿಕಲಚೇತನ ಕ್ರೀಡಾಪಟುಗಳು ನಗದು ಪುರಸ್ಕಾರಕ್ಕೆ ಅರ್ಹರಾಗಿರುವುದಿಲ್ಲ.
 • ನಗದು ಪುರಸ್ಕಾರ ನೀಡುವ ಷರ್ಷದ ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಪಂದ್ಯಾವಳಿಗಳ ಸಾಧನೆಯನ್ನು ಪರಿಶೀಲೀಸಿ ಪುರಸ್ಕರಿಸಲಾಗುವುದು.
 • ಅಂಗವಿಕಲ, ಬುದ್ದಿಮಾಂದ್ಯ, ಕುಬ್ಜ ಕ್ರೀಡಾಪಟುಗಳು ವಿಕಲಚೇತನರಿಗೆ ನೀಡಲಾಗುವ ನಗದು ಪುರಸ್ಕಾರಕ್ಕೆ ಅರ್ಹರಿರುತ್ತಾರೆ.
Feedback