ಶೈಕ್ಷಣಿಕ ಶುಲ್ಕ ಮರುಪಾವತಿ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಮಾಡುವ ಯೋಜನೆ 2013-14ನೇ ಸಾಲಿನ ನೂತನ ಯೋಜನೆಯಾಗಿದ್ದು, ಪ್ರತಿ ವರ್ಷ ಜುಲೈ ಮಾಹಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಪ್ರಥಮ ಪಿ.ಯು.ಸಿ. ಯಿಂದ (ಈಜು ಮತ್ತು ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ 5ನೇ  ತರಗತಿಯಿಂದ) ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥೀಗಳಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಯೋಜನೆಯ ಮಾರ್ಗಸೂಚಿಗಳು:
 1. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಘವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಇಲಾಖೆಯಿಂಧ ಮರುಪಾವತಿ ಮಾಡುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
 2. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳ ಅಧಿಕೃತ ಶುಲ್ಕಗಳನ್ನು (ಸರ್ಕಾರದಿಂದ ನಿಗಧೀಪಡಿಸಿದ ಪ್ರವೇಶ ಶುಲ್ಕ, ಭೋಧನಾ ಶುಲ್ಕ) ಮಾತ್ರ ಮರುಪಾವತಿ ಮಾಡಲಾಗುವುದು. ಇದರಲ್ಲಿ ಕಟ್ಟಡ ಶುಲ್ಕ, ಡೋನೇಷನ್, ಇನ್ನಿತರೆ ಶುಲ್ಕಗಳನ್ನು ಪಾವತಿಸಲು ಅವಕಾಶವಿರುವುದಿಲ್ಲ.
 3. ಆಯಾ ವರ್ಷದ ಶೈಕ್ಷಣಿಕ ಶೂಲ್ಕ ಮರುಪಾವತಿಯನ್ನು ಹಿಂಧಿನ ಶೈಕ್ಷಣಿಕ ವರ್ಷದ ಸಾಧನೆಯನ್ನು ಪರಿಗಣಿಸಿ ನೀಡಲಾಗುವುದು. (ಪ್ರತಿ ವರ್ಷ ಸಾಧನೆ ಮಾಡಿದಲ್ಲಿ ಮಾತ್ರ ಈ ಸೌಲಭ್ಯವನ್ನು ಮುಂದುವರಿಸಲಾಗುವುದು).
 4. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರಥಮ ಪಿ.ಯು.ಸಿ ಯಿಂದ ಸ್ನಾತಕೋತ್ತರ ಪದವಿ (ವೃತ್ತಿಪರ ಕೋರ್ಸ್ ಗಳನ್ನೊಳಗೊಂಡಂತೆ) ವ್ಯಾಸಂಗ ಮಾಡುತ್ತಿರುವ ಕೇಂಧ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ, (ಜಿಮ್ನಾಸ್ಟಿಕ್ ಮತ್ತು ಈಜು ಕ್ರೀಢಾ ಪಟುಗಳಿಗೆ 5ನೇ ತರಗತಿಯಿಂಧ ಸ್ನಾತಕ್ಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಅರ್ಹರಿರುತ್ತಾರೆ).
 5. ಶೈಕ್ಷಣಿಕ ವರ್ಷದ ಪ್ರವೇಶ ಶೂಲ್ಕ, ಭೋದನಾ ಶುಲ್ಕ ಪಾವತಿಸಿದ ರಶೀದಿಗಳೋಂದಿಗೆ ಶಾಲಾ ಮುಖ್ಯೋಧ್ಯಾರು/ಕಾಲೇಜು ಪ್ರಾಂಶುಪಾಲರ ಮೂಲಕ ದೃಢೀಕರಿಸಿ ಸಂಬಂಧಪಟ್ಟ ಜಿಲ್ಲೆಯ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಶೀಫಾರಿಸ್ಸಿನೊಂದಿಗೆ ಸಲ್ಲಿಸತಕ್ಕದ್ದು.
 6. ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಜೇತರಾದ ಕ್ರೀಡಾಪಟುಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾಋಎ. ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸುವಿಕೆ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಜೇತರ ಸಾಧನೆಯನ್ನು ಪರಿಗಣಿಸಲಾಗುವುದು.
 7. ವಿಕಲಚೇತನ ಕ್ರೀಡಾಪಟುಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ವಿಕಲಚೇತನ ಕ್ರೀಡಾಪಟುಗಳು ಕಡ್ಡಾಯವಾಗಿ ಸರ್ಕಾಋಇ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
 8. ಕರ್ನಾಟಕದ ನಿವಾಸಿಗಳಲ್ಲದ ಹಾಗೂ ರಾಜ್ಯವನ್ನು ಪ್ರತಿನಿಧೀಸದೇ ಇರುವ ಕ್ರೀಡಾಪಟುಗಳು, ರಾಜ್ಯದಲ್ಲಿ ವ್ಆಸಂಗ ಮಾಡುತ್ತಿಲ್ಲದ ಕ್ರೀಡಾ ವಿದ್ಯಾರ್ಥಿಗಳು ಶೈಕ್ಷಣಿಕ ಶೂಲ್ಕ ಮರುಪಾವತಿ ಯೋಜನೆಗೆ ಅರ್ಹರಾಗಿರುವುದಿಲ್ಲ.
 9. ಕ್ರೀಡಾ ಸಾಧನೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು/ಫೆಡರೇಷನ್ ಗಳು ಆಯೋಜಿಸಿರುವ ಕ್ರೀಡಾ ಕೂಟದಲ್ಲಿ ಭಾಘವಹಿಸಿರುವ ಬಗ್ಗೆ ದಾಖಲಾಗಿರಬೇಕು.
 10. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಆಹ್ವಾನ ಕ್ರೀಡಾಕೂಟಗಳಲ್ಲಿ ಭಾಘವಹಿಸಿರುವ ಕ್ರೀಡಾಪಟುಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
 11. ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಯಾವ ಕ್ರೀಡಾ ಸಂಸ್ಥೇಯ ಮೂಲಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ ಎಂಬುದರ ಬಗ್ಗೆ ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫಡರೇಷನ್/ಭಾರತೀಯ ಕ್ರೀಡಾ ಪ್ರಾಧಿಕಾರ ಇವರಿಂದ ಪ್ರಮಾಣಿಕರಿಸಿದ ಮೂಲ ಪ್ರಮಾಣ ಪತ್ರಗಳನ್ನು ಪರಿಗಣಿಸಿ ಶೈಕ್ಷಣಿಕ ಶುಲ್ಕ ಮರುಪಾವತಿ ಪಡೆಯಲು ದೃಢೀಕರಣ ಪತ್ರದೊಂಧಿಗೆ ಅರ್ಜಿಯ ಜೊತೆಗೆ ಒದಗಿಸಬೇಕು.
 12. ಯಾವುದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಕ್ರೀಡಾ ಸ್ಪರ್ಧೆಯಲ್ಲಿ ನೇರ ಪ್ರವೇಶ ಪಡೆದಂತಹ ಕ್ರಿಡಾಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಸೌಲಭ್ಯ ಪಡೆಯಲು ಅವಕಾಶವಿರುವುದಿಲ್ಲ.
 13. ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದಿಂಧ ಅಧಿಕೃತ ಕ್ರೀಡಾ ಸಂಸ್ಥೆಗಳಿಂದ , ಸಂಘಟಿಸಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ವಜೇತರಾದ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ಈ ಯೋಜನೆಗೆ ಅರ್ಹರಿರುತ್ತಾರೆ.
 14. ಈ ಕೆಳಕಂಡ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಈ ಯೋಜನೆಯನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಬಹುದು.
 • ಒಲಂಪಿಕ್ ಗೇಮ್ಸ್
 • ವರ್ಲ್ಡ್ ಚಾಂಪಿಯನ್ ಷಿಪ್
 • ಏಷಿಯನ್ ಚಾಂಪಿಯನ್ ಷಿಪ್
 • ಏಷಿಯನ್  ಗೇಮ್ಸ್
 • ಕಾಮನ್ ವೆಲ್ತ್ ಗೇಮ್ಸ್
 • ಕಾಮನ್ ವೆಲ್ತ್ ಚಾಂಪಿಯನ್ ಷಿಪ್
 • ಆಫ್ರೋ-ಎಷಿಯನ್ ಗೇಮ್ಸ್
 • ಎಸ್.ಎ.ಎಫ್. ಗೇಮ್ಸ್
 • ಇಂಟರ್ ನ್ಯಾಷನಲ್ ಮೀಟ್ಸ್
 • ನ್ಯಾಷನಲ್ ಗೇಮ್ಸ್
 • ನ್ಯಾಷನಲ್ ಚಾಂಪಿಯನ್ ಷಿಪ್
 • ಆಲ್ ಇಂಡಿಯಾ ಇಂಟರ್ ಜೋನಲ್ ಮೀಟ್ಸ್
 • ಎಸ್.ಜಿ.ಎಫ್.ಐ, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಮೀಟ್ಸ್, ಆಲ್ ಇಂಡಿಯಾ ಪ್ರೀ ಯೂನಿವರ್ಸಿಟಿ ಮೀಟ್ಸ್.
 • ಭಾಋತ ಸರ್ಕಾರದ ಅಂಗೀಕೃತ ಕ್ರೀಡಾ ಫೆಡರೇಷನ್ ನಿಂದ ಸಂಘಟಿಸಲಾದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ/ಶಾಲಾ ಮಟ್ಟದ ಚಾಂಪಿಯನ್ ಷಿಪ್ / ಪಂಛಛಾಯತ್ ರಾಜ್ಯ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ ಕ್ರೀಡಾಕೂಟಗಳು.
 • ಭಾರತ ಕ್ರೀಡಾ ಪ್ರಾಧೀಕಾರದಿಂದ ಆಯೋಜಿಸಲಾದ ಅಖಿಲ ಭಾರತ ಗ್ರಾಮೀಣ ಕ್ರೀಡಾಕೂಟ.
 • ಭಾರತ ಕ್ರೀಡಾ ಪ್ರಾಧೀಕಾರದಿಂದ ಆಯೋಜಿಸಲಾದ ಅಖಿಲ ಭಾರತ ಮಹಿಳಾ ಕ್ರೀಡಾಕೂಟ.
 • ಪ್ಯಾರಾ ಒಲಂಪಿಕ್
 • ಪ್ಯಾರಾ ಏಷಿಯನ್ ಗೇಮ್ಸ್
 • IWAS / ವಿಕಲಚೇತನರ/ಕುಬ್ಬರ ವರ್ಲ್ಡ್ ಕಪ್
 • ಅಂಗವಿಕಲರ ವರ್ಲ್ಡ್ ಗೇಮ್ಸ್
 • ನ್ಯಾಷನಲ್ ಗೇಮ್ಸ್ ಫಾಋ್ ಡಿಸೇಬಲ್ಡ್
 • ಅಂತರಾಷ್ಟ್ರೀಯ / ರಾಷ್ಟ್ರೀಯ ಅಂಗವಿಕಲರ ಚಾಂಪಿಯನ್ ಷಿಪ್ಸ್
 
Feedback