ಕ್ರೀಡಾ ವಸತಿ ಮತ್ತು ಶಾಲೆ

 
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವ ಮತ್ತು ವಿಕಸನಗೊಳಿಸುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕು, ಕೂಡಿಗೆಯಲ್ಲಿ 1982-83ನೇ ಸಾಲಿನಿಂದ 8, 9 ಮತ್ತು 10ನೇ ತರಗತಿಗಳನ್ನು ಹೊಂದಿರುವ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಪೂರ್ಣ ಪ್ರಮಾಣದ ಕ್ರೀಡಾ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿರುತ್ತದೆ. ಇದೇ ರೀತಿ ಬೆಂಗಳೂರು ನಗರ ಜಿಲ್ಲೆಯ ವಿದ್ಯಾನಗರ ಇಲ್ಲಿ 1994-95 ಸಾಲಿನಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಕ್ರೀಡಾ ವಸತಿ ಶಾಲೆಯನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿರುತ್ತದೆ. ನಂತರದಲ್ಲಿ ಜಿಲ್ಲಾ ಕೇಂದ್ರಗಳಾದ, ಬೆಂಗಳೂರು, ಮೈಸೂರು, ಬೆಳಗಾವಿ, ಬಿಜಾಪುರ ಮತ್ತು ದಾವಣಗೆರೆಗಳಲ್ಲಿ ಕ್ರೀಡಾ ವಸತಿ ನಿಲಯಗಳನ್ನು ಪ್ರಾರಂಭಿಸಲಾಯಿತು. ಈ ಕ್ರೀಡಾಶಾಲೆಗಳಲ್ಲಿ ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ಫುಟ್ಬಾಲ್ ಹಾಗೂ ವಾಲಿಬಾಲ್ ಕ್ರೀಡೆಗಳಲ್ಲಿ ತರಬೇತಿಯನ್ನು ಹಾಗೂ ಕ್ರೀಡಾ ನಿಲಯಗಳಲ್ಲಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ಫುಟ್ಬಾಲ್, ವಾಲಿಬಾಲ್, ಕುಸ್ತಿ, ಜುಡೋ ಹಾಗೂ ಸೈಕ್ಲಿಂಗ್ ಕ್ರೀಡೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿ ಈ ಕೆಳಕಂಡಂತೆ ರಾಜ್ಯದ 23 ಜಿಲ್ಲೆಗಳಲ್ಲಿ 5ನೇ ತರಗತಿಯಿಂದ 7ನೇ ತರಗತಿಯವರೆಗೆ  ಜಿಲ್ಲಾ ಕ್ರೀಡಾಶಾಲೆಗಳನ್ನು ಪ್ರಾರಂಭಿಸಲಾಗಿದೆ.

 ಜಿಲ್ಲಾ ಕ್ರೀಡಾಶಾಲೆಗಳು : ರಾಮನಗರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ,  ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ ಉಡುಪಿ. ಮಂಗಳೂರು, ಬೆಳಗಾವಿ,   ಉತ್ತರ ಕನ್ನಡ, ಬಿಜಾಪುರ, ಗದಗ, ಹಾವೇರಿ, ಧಾರವಾಡ, ಕೊಪ್ಪಳ,ಬೀದರ್, ರಾಯಚೂರು ಮತ್ತು ಬಾಗಲಕೋಟೆ.

ಕ್ರೀಡೆಗಳು : ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಫುಟ್ಬಾಲ್, ಹಾಕಿ, ಜುಡೋ, ವಾಲಿಬಾಲ್, ಕುಸ್ತಿ.

ಪ್ರವೇಶ : ಆಯಾ ವರ್ಷದ ಜೂನ್ 1ನೇ ತಾರೀಖಿಗೆ 11 ವರ್ಷದ ವಯೋಮಿತಿಯಲ್ಲಿರುವ ಬಾಲಕ ಬಾಲಕಿಯರಿಗೆ  ಇಲಾಖಾ ಮಾನದಂಡದ ಪ್ರಕಾರ ಆಯ್ಕೆ ಮಾಡಿ 5ನೇ ತರಗತಿಗೆ ಪ್ರವೇಶ ನೀಡಲಾಗುವುದು. 5ನೇ ತರಗತಿಯಿಂದ 7ನೇ ತರಗತಿಯವರೆಗೆ ಜಿಲ್ಲಾ ಕ್ರೀಡಾಶಾಲೆಗಳನ್ನು ನಡೆಸಲಾಗುತ್ತಿದೆ.

ಕ್ರೀಡಾ ವಸತಿ ಪ್ರೌಢಶಾಲೆ : ಕೂಡಿಗೆ : ಬಾಲಕ  ಬಾಲಕಿಯರಿಗೆ – ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಹಾಕಿ.   ವಿದ್ಯಾನಗರ : ಬಾಲಕ ಬಾಲಕಿಯರಿಗೆ – ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್,ಫುಟ್ಬಾಲ್, ವಾಲಿಬಾಲ್,

ಪ್ರವೇಶ : ಬಾಲಕ ಬಾಲಕಿಯರ ವಿಭಾಗದಲ್ಲಿ ಕ್ರೀಡಾ ವಸತಿ ಪ್ರೌಢಶಾಲೆ/ ನಿಲಯಗಳಿಗೆ ಪ್ರವೇಶ ಪಡೆಯಲು ಆಯಾ ವರ್ಷದ ಜೂನ್ 1 ರಂದು 14 ವರ್ಷದೊಳಗಿರಬೇಕು.  ಇಲಾಖಾ ಮಾನದಂಡದ ಪ್ರಕಾರ ಆಯ್ಕೆ ಮಾಡಿ 8ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುವುದು

ಕ್ರೀಡಾ ವಸತಿ ನಿಲಯ: ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ, ಬಿಜಾಪುರ : ಬಾಲಕ ಬಾಲಕಿಯರಿಗೆ,  ಹಾಗೂ ಪುರುಷರು ಮತ್ತು ಮಹಿಳೆಯರಿಗೆ –   ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್, ಸೈಕ್ಲಿಂಗ್ ಫುಟ್ಬಾಲ್, ಹಾಕಿ, ಜುಡೋ, ವಾಲಿಬಾಲ್, ಕುಸ್ತಿ.   ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರೀಡಾ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು ಆಯಾ ವರ್ಷದ ಜೂನ್ 1 ರಂದು 18 ವರ್ಷದೊಳಗಿರಬೇಕು. ಇಲಾಖಾ ಮಾನದಂಡದ ಪ್ರಕಾರ ಆಯ್ಕೆ ಮಾಡಿ ಮೊದಲನೇ ಪಿ.ಯು.ಸಿ.ಗೆ  ಮಾತ್ರ  ಪ್ರವೇಶ ನೀಡಲಾಗುವುದು.

ಸೌಲಭ್ಯಗಳು: ಸದರಿ ಕ್ರೀಡಾಶಾಲೆ/ನಿಲಯಗಳಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ವೈಜ್ಞಾನಿಕ ಕ್ರೀಡಾ ತರಬೇತಿ. ನೀಡಲಾಗುತ್ತಿದೆ. ಈ ಕ್ರೀಡಾಪಟುಗಳ ಕ್ರೀಡಾ ತರಬೇತಿಗೆ ಸಂಬಂಧಿಸಿದಂತೆ ಎಲ್ಲಾ ವೆಚ್ಚಗಳನ್ನು (ಸಮವಸ್ತ್ರ ಕ್ರೀಡೋಪಕರಣಗಳು, ಕ್ರೀಡಾಗಂಟು, ವೈದ್ಯಕೀಯ ವೆಚ್ಚ, ಊಟ ಮತ್ತು ವಸತಿ, ಪ್ರಯಾಣ ವೆಚ್ಚ, ಪಂದ್ಯಾಳಿಗಳಲ್ಲಿ ಭಾಗವಹಿಸುವಿಕೆ, ಇತ್ಯಾದಿ) ಗಳನ್ನು ಇಲಾಖೆಯಿಂದ ಭರಿಸಲಾಗುತ್ತಿದೆ.  ಕ್ರೀಡಾಶಾಲೆ/ನಿಲಯದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದವರಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಹಾಗೂ ಕ್ರೀಡಾಪಟುಗಳ ವೈದ್ಯಕೀಯ ವೆಚ್ಚ, ವೈದ್ಯರ, ಶಿಕ್ಷಕರ ಗೌರವಧನ, ರಾತ್ರಿ ಕಾವಲುಗಾರರ, ಹೇರ್ ಕಟಿಂಗ್ ಮಾಡುವವರ, ಬಟ್ಟೆ ಸ್ವಚ್ಚತೆ ಮಾಡುವವರ, ಹಾಗೂ ದೈನಂದಿನ ಇನ್ನಿತರೆ ವೆಚ್ಚಗಳನ್ನು ಇಲಾಖೆಯ ಅನುದಾನದಲ್ಲಿ ವೆಚ್ಚ ಭರಿಸಲಾಗುತ್ತಿದೆ. 2014-15ನೇ ಸಾಲಿನಿಂದ ರಾಮನಗರ, ಕೋಲಾರ, ಮಂಗಳೂರು, ಹಾಸನ, ರಾಯಚೂರು, ಮಂಡ್ಯ ಮತ್ತು ಮೈಸೂರು ಜಿಲ್ಲಾ ಕ್ರೀಡಾಶಾಲೆಗಳನ್ನು 5ನೇ ತರಗತಿಯಿಂದ 10ನೇ ತರಗತಿಯವರೆಗೆ ಹಾಗೂ ವಿದ್ಯಾನಗರ ಮತ್ತು ಕೂಡಿಗೆ ಕ್ರೀಡಾಶಾಲೆಗಳನ್ನು 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಮೇಲ್ದಜðಗೇರಿಸಲು ಸಕಾðರದಿಂದ ಅನುಮತಿ ದೊರಕಿದೆ.

*****

Feedback