ವಿಮಾ ಯೋಜನೆ

ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ

ರಾಜ್ಯದಲ್ಲಿಕ್ರೀಡೆಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯಭದ್ರತೆಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆಅತಿವಿನೂತನ “ಯುವ ಕ್ರೀಡಾ ಅಂಜೀವಿನಿವಿಮಾ ಯೋಜನೆ” ಯನ್ನು ಪ್ರಾರಂಭಿಸಿದೆ. ಕರ್ನಾಟಕವನ್ನು ಅಂತರ್ರಾಜ್ಯ, ಅಂತರ್ರಾಷ್ಟ್ರಹಾಗೂರಾಷ್ಟ್ರಮಟ್ಟದಲ್ಲಿಪ್ರತಿನಿಧಿಸಿ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ಅರ್ಹ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸಲು ಕೋರಿದೆ.

ವೈಶಿಷ್ಟತೆ :

 • ಅಪಘಾತ, ಆರೋಗ್ಯ, ಭದ್ರತೆಹಾಗೂಸುರಕ್ಷತೆಯಕಾಳಜಿ
 • ಸುಮಾರು 10,000 ಕ್ರೀಡಾ ಪಟುಗಳಿಗೆವಿಮಾಪಾಲಿಸಿಲಭ್ಯ.
 • ಅಂತರ್ರಾಜ್ಯ, ಅಂತರ್ರಾಷ್ಟ್ರಹಾಗೂರಾಷ್ಟ್ರೀಯ ಕ್ರೀಡಾ ಪಟುಗಳಿಗೆ ಮತ್ತು ತರಬೇತುದಾರರಿಗೆ ಇದೊಂದು ವರದಾನ.
 • ಕ್ರೀಡಾ ಸಾಮಗ್ರಿ / ವಸ್ತುಗಳನಷ್ಟಪರಿಹಾರ.
 • ಕ್ರೀಡಾಪಟುಗಳ ಸನಿಹದ ಸಂಬಂಧಿಗಳಿಗೆ ಹಾಗೂ ಜೋತೆಗಿದ್ದ 3ನೇ ವ್ಯಕ್ತಿಗಳಿಗೆ ಅಪಘಾತದ ನಷ್ಟಪರಿಹಾರ.
 • ಕ್ರೀಡಾಪಟುಗಳಿಗೆ ಅವಲಂಬಿತರಿಗೆ ಆಶ್ರಯ.
 • ಸರಳವಾರ್ಷಿಕ ನವೀಕರಣ ಸೌಲಭ್ಯ

ಅರ್ಹತೆ ಹಾಗೂ ನಿಬಂಧನೆ:

ಅರ್ಹತೆ: ರಾಜ್ಯ, ಅಂತರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು  ಪ್ರತಿನಿಧೀಸುವ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥೀಗಳು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಮಾನ್ಯತೆ ಪಡೆದ ಕ್ರೀಡಾ ಸಂಸ್ಥೇಗಳ ತರಬೇತುದಾರರು ಅರ್ಹರು.

ವಯೋಮಿತಿ : ಕನಿಷ್ಠ 07 ವರ್ಷ ಹಾಗೂ ಗರಿಷ್ಠ 35 ವರ್ಷ, ತರಬೇತುದಾರರಿಗೆ 18-35 ವರ್ಷ.

ಅವಧಿ: ವಿಮೆ ಅಳವಡಿಕೆಯ ದಿನದ ಒಂಧು ವರ್ಷದಿದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ.

ಪ್ರೀಮಿಯಂ: ಕ್ರೀಡಾಪಟುಗಳಿಗೆ ವಿಮಾಯೋಜನೆಯ ಸಂಪೂರ್ಣ ಉಚಿತ (ಯಾವುದೇ ಮೊತ್ತ ಪಾವತಿಸಬೇಕಾಗಿಲ್ಲ).

ಯುವ ಕ್ರೀಡಾ ಸಂಜೀವನಿ ಯೋಜನೆಯನ್ನು ರಾಜ್ಯದ ಸುಮಾರು 10,000 ಕ್ರೀಡಾಪಟುಗಳಿಗೆ ಅಳವಡಿಸಲು ಉದ್ದೇಶಿಸಲಾಗಿದ್ದು, ರಾಜ್ಯ, ಅಂತರ್ ರಾಷ್ಟ್ರ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾ ಶಾಲೆ ಮತ್ತು ನಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಮಾನ್ಯತೆ ಪಡೆದ ಕ್ರೀಡೆ ಸಂಸ್ಥೇಗಳು ನಡೆಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾ ವಿದ್ಯಾರ್ಥಿಗಳು ಇದರ ಸುಪಯೋಗ ಪಡೆಯಬಹುದು.

ವಿಮಾ ಯೋಜನೆಯ ಪ್ರೀಮಿಯಂದರ ಹಾಘೂ ವಿಮಾ ಸೌಲಭ್ಯಗಳ ವಿವರ:

ಕ್ರ.ಸಂ ವಿವರ ಪ್ರೀಮಿಯಂದರ (ಇಲಾಖೆಯಿಂದ ಪಾವತಿಸಲಾಗುವುದು) ಕ್ರೀಡಾ ಗಂಟು ಕಳೆದುಹೋದಲ್ಲಿ / ನಷ್ಟವಾದಲ್ಲಿ ಹೆಚ್ಚುವರಿ ಮರಣ ವಿಮಾ ಮೊತ್ತ ವೈದ್ಯಕೀಯ ವಿಮಾ ಮೊತ್ತ
1 ಅಂತರ್ರಾಷ್ಟದ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ 801/- 5000/- 5,00,000/- 3,00,000/-
2 ತರಬೇತುದಾರರಿಗೆ 912/- 5000/- 5,00,000/- 1,50,000/-
3 ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಘವಹಿಸುವ ಕ್ರೀಡಾಪಟುಗಳಿಗೆ 489/- 3000/- 2,00,000/- 1,50,000/-
4 ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ 372/- 1,00,000/- 75,000/-

 

ಇತರೆ ಸೌಲಭ್ಯಗಳು:

 • ವೈಯಕ್ತಿಕ ಅಪಘಾತ ವಿಮಾ ಸುರಕ್ಷತೆ ( ಕನಿಷ್ಠ ರೂ 25,000 ದಿಂದ ಗರಿಷ್ಠ ರೂ 1,00,000 ತನಕ)
 • ವಿಕಲಾಂಗ ವಿಮಾ ಸುರಕ್ಷತೆ
 • ಕ್ರೀಡಾ ಸಾಮಗ್ರಿ / ವಸ್ತು ಕಳವು ಅಥವಾ ನಷ್ಟ ಪರಿಹಾತ ಆಸ್ಪತ್ರೆ ಶುಶ್ರೂಷೆ ವೆಚ್ಚ.
 • ಆಸ್ಪತ್ರೆ-ಔಷಧೀಯ ವೆಚ್ಚಗಳಿಗಾಗಿ ನಗದುರಹಿತ ಸೇವೆ(ಕ್ಯಾಶ್ ಲೆಸ್ ಸರ್ವಿಸ್)ಲಭ್ಯ
 • ಅಂತ್ಯ ಸಂಸ್ಕಾರ, ಮಕ್ಕಳ ವಿಧ್ಯಾಭ್ಯಾಸ ಅಥವಾ ಉದ್ಯೋಗ ನಷ್ಟದ ಪರಿಹಾರ
 • ಇತರೆಲ್ಲಾ ಸೌಲಭ್ಯಗಳ ವಿವರಗಳನ್ನು, ಯುವ ಕ್ರೀಡಾ ಸಂಜೀವಿನಿ ವಿಮಾಯೋಜನೆಯ ವಿವರವಾದ ರೂಪರೇಷೆಗಳನ್ನು ಕ್ರೀಡಾಪಟುಗಳಿಗೆ ವಿಮಾ ಪಾಲಿಸಿ ಮಾಡುವ ಸಂದರ್ಭದಲ್ಲಿ ಒದಗಿಸಲಾಗುವುದು.

'Shri. Pramod Madhavaraj, Hon'ble Minister for Youth Empowerment and Sports & Fisheries Last Date for Submitting Online Applications Has Been Extended Till 15/10/2017


Feedback