ನಮ್ಮೂರ ಶಾಲೆಗೆ ನಮ್ಮ ಯುವಜನರು

ನಮ್ಮೂರ ಶಾಲೆಗೆ ನಮ್ಮ ಯುವಜನರು ಪರಿಕಲ್ಪನೆಯ ಸೂಚನೆ
 1. ಪೀಠಿಕೆ
ಶೇ. 63ರಷ್ಟು ಯುವಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ: ಶೇ.24ರಷ್ಟು ಯುವಜನರು ಅನಕ್ಷರಸ್ಥರು: ಇದರಲ್ಲಿ ಶೇ. 65ರಷ್ಟುಜನರು ಯುವ ಮಹಿಳೆಯರಯ ಶೇ54.3ರಷ್ಟು ಯುವಜನರು ಎಸ್.ಎಸ್.ಎಲ್.ಸಿ. ನಂತರದ ಔಪಚಾರಿಕ ಶಿಕ್ಷಣವಿಲ್ಲದವರು ಕರ್ನಾಟಕದಲ್ಲಿ ಒಟ್ಟು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಯುವಜನರ ಅನುಪಾತ (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ)ಕೆವಲ ಶೇ. 13ರಷ್ಟಿದೆ. ತಾಲ್ಲೂಕನ್ನು ಘಟಕವನ್ನಾಗಿಸಿಕೋಂಡು, ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ, ದೂರದೃಷ್ಟಿ, ಸೇವಾನಿಷ್ಠೆ ಮತ್ತು ಜನಸಾಮಾಣ್ಯರ ಸಬಲೀಕರಣಕ್ಕಾಗಿ ಅದರಲ್ಲೂ ಶಾಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಸಾಧನೆ ತೋರುವ ಮತ್ತು ಈ ನಿಟ್ಟಿನಲ್ಲಿ ಅಪಾರವಾಗಿ ಶ್ರಮೀಸುವ ಯುವಜನರನ್ನು ಪ್ರೋತ್ಸಾಹಿಸಲಾಗುವುದು. ಯುವಜನರು ತಮ್ಮ ಶಿಕ್ಷಣವನ್ನು ಮುಂದುವರೆಸುವ ಮತ್ತು ಅದನ್ನೇ ಸೃಜನಶೀಲ ರೀತಿಯಲ್ಲಿ ಮಾಡುವ ಅವಶ್ಯಕತೆ ತುಂಬಾ ಇದೆ ಎಂಬುದನ್ನು ಈ ಮೇಲಿನ ಅಂಕಿ-ಅಂಶಗಳು ಸೂಚಿಸುತ್ತವೆ, ಈ ಹಿನ್ನೆಲೆಯಲ್ಲಿ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಎಂಬ ಯೋಜನೆಯನ್ನು ರೂಪಿಸಲಾಗಿದೆ.
 1. ಗುರಿ ಮತ್ತು ಉದ್ದೇಶಗಳು
 2. ವಿದ್ಯಾರ್ಥಿಯೇತರ ಯುವಜನರು ಕಾರ್ಯ ನಿರ್ವಹಿಸುವಷ್ಟು ಸಾಕ್ಷರತೆಯನ್ನು ಪಡೆದುಕೋಳ್ಲೂವುದಕ್ಕೆ ಅವಕಾಶ ಒದಗಿಸುವುದು
 3. ಊರಿನ ಶಾಲೆ ಮತ್ತು ಸಾಲೆಯ ಪರಿಸರದ ನೈರ್ಮಲ್ಯ ಕಾಪಾಡುವುದು
 4. ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯು ಪ್ರತಿಶತ ನೂರರಷ್ಟಾಗುವಂತೆ ಮಾಡುವುದು.
 5. ಆಟದ ಮೈದಾನವನ್ನು ವರ್ಷಪೂರ್ತಿ ಉತ್ತಮ ಸ್ಥಿತಿಯಲ್ಲಿರುವ ಹಾಗೆ ಮತ್ತು ಮಕ್ಕಳು ಮೈದಾನವನ್ನು ಉಫಯೋಗಿಸುವಂತೆ ಪೇರೇಪಿಸುವುದು.
 6. ಶಾಲಾ ಮಕ್ಕಳ ಪರಿಕ್ಷೆಯ ಸಾಧನೆಯು ಆರ್ಥಪೂರ್ಣವಾಗಿ ಹೆಚ್ಚುವಂತೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಗಾಗಿ ತರಬೇತಿಗಳನ್ನು ಹಮ್ಮಿಕೊಳ್ಳುವುದು.
 7. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ/ಯುವಜನರು ಪ್ರವೇಶ ಪಡೆಯುವ ಅವಶ್ಯಕತೆಯನ್ನು ಮನಗಾಣಿಸಿ ಕೋಡಲು ಕೋರ್ಸ ಪ್ರಾರಂಭದ ಕಾಲದಲ್ಲಿ ವಿಶೇಷ ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುವುದು.
 8. ಯುವಜನರು ತಮ್ಮ ಸ್ಥಳೀಯ ಕಲೆ,ಸಾಹಿತ್ಯ,ಸಂಸ್ಕೃತಿ,ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳಲು ಪ್ರೇರಣೆ ನೀಡುವುದು.
 9. ವಿಧಾನ
ಗ್ರಾಮ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಯು ಈ ಕೆಳಕಾಣಿಸಿದ ಕಾರ್ಯಚಟುವಟಿಕೆಗಳಲ್ಲಿ ಮಾಪನ ಮಾಡುಬಹುದಾದ ಸಾಧನೆಯನ್ನು ಸಾಧಿಸಿ ರುವುದನ್ನು ಗಮನಿಸಿ,ಪ್ರತಿ ತಾಲ್ಲೂಕಿನ ಒಂದು ಯುವ ಸಂಘಟನೆಗೆ ಪ್ರತಿ ವರ್ಷ ಗರಿಷ್ಠ ರೂ.1.00 ಲಕ್ಷದಂತೆ ಪ್ರೋತ್ಸಾಹ ಧನ ನೀಡಲಾಗುವುದು. ಎ) ಊರಿನ ಶಾಲೆ/ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ:ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳ,ಅವರ ವ್ಯಕ್ತಿತ್ವ ವಿಕಸನ,ಶಾಲಾ ಆವರಣದ ಶುಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ. ಬಿ) ಶಿಕ್ಷಣದ ಮಹತ್ವ ಶಾಲೆಗೆ ದಾಖಲುಗೋಳ್ಳುವ ತುರ್ತು, ಶಾಲೆಯಿಂದ ಯಾವ ಮಕ್ಕಳೂ ಹೊರಗೆ ಉಳಿಯದಂತೆ ಜಾಗೃತಿ ಸಿ) ಶಾಲೆಗೆ ಮತ್ತು ಗ್ರಾಮಕ್ಕೆ ಅಗತ್ಯವಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಳ್ಳುವ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವುದು ಡಿ) ಸರ್ಕಾರಿ ಇಲಾಖೆಗಳಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಒದಗುವ ಹತ್ತು ಹಲವು ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ಇಲಾಖೆಗಳ ಕಾರ್ಯಕ್ರಮ/ಯೋಜನೆಗಳ ಅನುಷ್ಠಾನದಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಿಸುವುದು. ಇ) ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ: ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಲ್ಲಿ ಕಲೆ,ಸಾಹಿತ್ಯ,ಸಂಸ್ಕೃತಿ ಕ್ಷೇತ್ರಗಳನ್ನು ಸಮಗ್ರಗೊಳಿಸಿ ಯುವಜನರು ಅಭಿವ್ಯಕ್ತಿಗೆ ವೇದಿಕೆ ನಿರ್ಮಿಸಲಾಗುವುದು. ಈ) ಯುವಜನರಿಗೆ ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಉತ್ತೇಜನ:ಪ್ರಸ್ತುತ ಚಾಲ್ತಿಯಲ್ಲಿರುವ ಕ್ರೀಡೆ,ಸಾಹಸ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ಯುವಜನರಿಗೆ ನೀಡಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಯುವ ಸಂಘಟನೆಯು ಮಾಡಿದ ಸಾಧನೆಯನ್ನು ಗುರುತಿಸುವ ಕಾರ್ಯವು ಈ ವರ್ಷದ ಜುನ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಬಿದ್ದ ಬಳಿಕ ಪ್ರೋತ್ಸಾಹ ಧನವನ್ನು ಪಡೆಯುವ ಆಸಕ್ತಿ ಹೊಂದಿದ ಯುವ ಸಂಘಟನೆಗಳು ತಮ್ಮ ಕಾರ್ಯಸಾಧನೆ ಕುರಿತು ಒಂದು ಬೇಸ್ ಲೈನ್(ಸಂಕ್ಷಿಪ್ತ ಕಾರ್ಯಸಾಧನಾ ಪಟ್ಟಿ) ಯನ್ನು ಇಲಾಖೆಯ ಜಿಲ್ಲಾ ಕಚೇರಿಗೆ ಕಳುಹಿಸಿ ಕೊಡಬೇಕು. ಬೇಸ್ ಲೈನ್ ಗಳನ್ನು ಆಧರಿಸಿ, ರಾಜ್ಯ ಮಟ್ಟದ ಆಯ್ಕೆ ಸಮಿತಿಯು ಯುವ ಸಂಘಟನೆಯ ಆಯ್ಕೆಯನ್ನು ಈ ಕೆಳಗಿನ ಮಾನದಂಡಗಳ ಆಧಾರದ ಮಾಡಲಾಗುವುದು.
 1. ವ್ಯಾಪ್ತಿ ಮತ್ತು ಅವಧಿ
  • ಜುಲೈನಿಂದ ಜೂನ್ ವರೆಗೆ.
  • ತಾಲ್ಲೂಕಿನ ಕನಿಷ್ಠ ಒಂದು ಊರು ಮತ್ತು ಶಾಲೆ.
 2. ಘಟಕ ವೆಚ್ಚ
 3. ಪ್ರತಿ ತಾಲ್ಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮತ್ತು ಅಲ್ಲಿನ ಯುವಜನರನ್ನು ಸಬಲಗೊಳಿಸುವ ಕಾರ್ಯದಲ್ಲಿ ಗಮನಾರ್ಹ ಸಾಧನೆಯನ್ನು ಮಾಡುವ ಯುವ ಸಂಘಕ್ಕೆ/ಯುವ ಗುಂಪಿಗೆ ಪ್ರೋತ್ಸಾಹ ಧನವಾಗಿ ಗರಿಷ್ಠ ರೂ.1.00 ಲಕ್ಷ
 4. ಆಡಳಿತ ವೆಚ್ಚ ರೂ.1.76 ಲಕ್ಷ.
 5. ಫಲಶೃತಿ
 6. ಯಾವುದೇ ಪ್ರಯೋಜನಗಳನ್ನು ಪಡೆಯಲು ಅಸಮರ್ಥರಾಗಿರುವ ತಮ್ಮ ಸಮವಯಸ್ಕರಿಗೆ, ವಿದ್ಯಾರ್ಥಿಯೇತರ ಯುವಜನರಿಗೆ ಬೆಂಬಲ ದೊರಕುತ್ತದೆ.ಶಾಲೆ ಮತ್ತು ಗ್ರಾಮೀಣ ಪರಿಸರ ಶುಚಿಯಾಗುತ್ತದೆ. ಗ್ರಾಮದ ಶಾಲೆಗೆ ಶೌಚಾಲಯ ಒದಗುತ್ತದೆ.ಶಾಲೆಯ ಎಲ್ಲಾ ಮಕ್ಕಳಲ್ಲಿ ಮಳೆಕೊಯ್ಲು ಬಗ್ಗೆ ತಿಳುವಳಿಕೆ ಮೂಡುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ದೊರಕುವ ಫಲಾನುಭವವನ್ನು ಗ್ರಾಮೀಣರಿಗೆ ಒದಗುತ್ತದೆ. ಸ್ವಯಂ ಸೇವಾ ಭಾವನೆಯ ಯುವಜನರು ಸಂಖ್ಯೆ ಹೆಚ್ಚುತ್ತದೆ.
 7. ಕಲಿಯಲು ಮಂದೆ ಬಂದ ವಿದ್ಯಾರ್ಥಿಯೇತರ ಯುವಜನರು ಸಂಖ್ಯೆ
 8. ಕಾಲೇಜ್ /ವಿಶ್ವವಿದ್ಯಾಲಯಗಳಲ್ಲಿ ನೋಂದಾವಣೆಗೋಂಡವರ ಸಂಖ್ಯೆಯಲ್ಲಿ ಆದ ಹೆಚ್ಚಳ
ಈ ಮೂಲಭೂತ ಯೊಜನೆ ಮಾರ್ಗಸೂಚಿಗಳಲ್ಲಿದೆ ವಿವರವಾದ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಹಾಗೂ ಇದನ್ನು ಸರ್ಕಾರಕ್ಕೆ ಕೂಡಲೇ ಸಮರ್ಪಿಸಲಾಗುವ್ಯದು.
 1. ನಿಯಮ ನಿಬಂಧನೆಗಳು:
 • ಈ ಸ್ಪರ್ದೆಯಲ್ಲಿ ಬಾಗವಹಿಸುವ ಯುವ ಸಂಘವು ಸಂಬಂಧಿತ ಇಲಾಖೆಗಳಿಗೆ ನೋಂದಣಿ ಮತ್ತು ಮಾನ್ಯತೆ ಪಡೆದಿರುವುದು ಕಡ್ಡಾಯ
 • ಇದು ಸ್ವರ್ಧೆ ಮಾತ್ರ ಆಗಿರುವುದರಿಂದ ಸ್ಪರ್ದೆಯ ಅವಧಿಯಲ್ಲಿ ಯಾವುದೇ ರೀತಿಯ ಧನ ಸಹಾಯವನ್ನು ನಿರೀಕ್ಷಿಸುವಂತಿಲ್ಲ.
 • ಒಂದು ತಾಲೂಕಿನಿಂದ ಒಂದು ಯುವ ಸಂಘವನ್ನು ಆಯ್ಕೆ ಮಾಡಬಹುದಾಗಿದೆ.
 • ಒಂದು ವರ್ಷ ಒಂದು ಯುವ ಸಂಘವು ಸ್ಪರ್ಧೆ ಗೆದ್ದಲ್ಲಿ ಆ ಯುವ ಸಂಘವು ಮುಂದಿನ ವರ್ಷ ಈ ಸ್ಪರ್ಧೆಯಲ್ಲಿ ಬಾಗವಹಿಸಲು ಅವಕಾಶವಿರುವುದಿಲ್ಲ.
 • ಮುಂದಿನ ವರ್ಷದಲ್ಲಿ ಈ ಯುವ ಸಂಘಗಳು ಮೆಂಟರ್ ಯುವ ಸಂಘವಾಗಿ ಆಯ್ಕೆಯಾಗುವ ಅವಕಾಶವಿರುವುದು. ಮೆಂಟರ್ ಯುವ ಸಂಘಗಳಿಗೆ ಇಲಾಖೆಯ ಬೇರೆ ಕಾರ್ಯಕ್ರಮ,ಇತ್ಯಾದಿ
 • ಪ್ರೋತ್ಸಾಹ ಧನವನ್ನು ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೋಡಗಿಸಿಕೊಂಡಲ್ಲಿ ಈ ಕೆಲಸಗಳನ್ನು ಪ್ರಸ್ತುತಗೊಳಿಸಲು ವೇದಿಕೆಗಳನ್ನು ನಿರ್ಮಿಸಲಾಗುವುದು.
 1. ಈ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆ ಪ್ರಕಾರಗಳು ಹೀಗಿವೆ:
ವಿಭಾಗ 1: ಭೌತಿಕ ವಿಭಾಗ 1: ಭೌದ್ಧಿಕ
1.ಅ ಶಾಲಾ ಆವರಣವನ್ನು ಹಸಿರೀಕರಣ ಮಾಡುವುದು ಮತ್ತು ನಿರ್ವಹಿಸುವುದು ಶಾಲಾ ಆವರಣದಲ್ಲಿ ಪೌಷ್ಟಿಕ ಆಹಾರ ಕೈತೋಟ ನಿರ್ಮಾಣ 2.ಅ ವೈಜ್ಞಾನಿಕ ವಿಷಯಗಳಲ್ಲಿ ಅರಿವು ಮೂಡಿಸುವುದು ಮತ್ತು ಸರಳ ಬೋಧನೆ
1.ಆ ಶಾಲಾ ಆವರಣದಲ್ಲಿ ಆಟದ ಮೈದಾನ ಅಭಿವೃದ್ದಿ/ಉನ್ನತೀಕರಣ 2.ಆ ಮಕ್ಕಳ ಪಠ್ಯ ಜ್ಞಾನದ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ
1.ಇ ಶಾಲಾಗೆ ಅಗತ್ಯವಾದ ಸೈಕ್ಷಣಿಕ ಸಾಮಗ್ರಿಗಳ ಪೂರೈಕೆ-ಪುಸ್ತಕ, ಚಾರ್ಟ ಇತ್ಯಾದಿ 2.ಇ ನವೀನ ರೀತಿಯ ಬೋಧನೆಗೆ ಶಿಕ್ಷಕರಿಗೆ ಸಹಕರಿಸುವಿಕೆ
1.ಈ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ 2.ಈ ಜೀವನ ಕೌಶಲ್ಯ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ತರಭೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
1.ಉ ಶಾಲಾ ಆವರಣದಲ್ಲಿ ಮಳೆ ನೀರುಕೋಯ್ಲು ನಿರ್ಮಾಣ 2.ಉ ಅಧ್ಯಯನ ಅಥವಾ ಸರಳ ಕಲಿಕಾ ತಂತ್ರಗಳ ತರಬೇತಿ
1.ಊ ಶಾಲಾಯಲ್ಲಿ ಸೌರ ಶಕ್ತಿ ಘಟಕ ನಿರ್ಮಾಣ ಮತ್ತು ಬಳಕೆಗೆ ಉತ್ತೇಜನ 2.ಊ ವಿಶೇಷ ಮಕ್ಕಳ ಆರೈಕೆ(ಬುದ್ಧಿಮಾಂದ್ಯ ಶಾಲೆ,ಇನ್ನಿತರೆ ಕಡೆಗಳಲ್ಲಿ)
1.ಋ ಶಾಲಾ ಅವರಣದಲದಲ್ಲಿ ವಿಜ್ಞಾನ ಪ್ರಾತ್ಯಕ್ಷಿಕೆಗಳ ಸ್ಥಾಪನೆ 2.ಋ ವಿಶೇಷ ಮಕ್ಕಳಿಗೆ ಪರಿಹಾರ ಬೋಧನೆ
1.ಎ ಶಾಲಾ ಆವರಣದಲ್ಲಿ ಸ್ಥಳೀಯ ಮಟ್ಟದ ವಸ್ತು ಸಂಗ್ರಹಾಲಯದ ನಿರ್ಮಾಣ ಮತ್ತು ಬಳಕೆಗೆ ಉತ್ತೇಜನ 2.ಎ ಮಕ್ಕಳಲ್ಲಿ ಪರಿಸರ ಮತ್ತು ಜೀವ ವೈವಿಧ್ಯತೆ ಬಗ್ಗೆ ಆಸಕ್ತಿಯನ್ನು ಉತ್ತೇಜಿಸುವ ಕಾರ್ಯಕ್ಮಗಳನ್ನು ಆಯೋಜಿಸುವುದು
1.ಏ ಅತ್ಯಾಧುನಿಕ ಕಲಿಕಾ ಸಾಮಗ್ರಿಗಳ ವಿತರಣೆ ಮತ್ತು ನಿರ್ವಹಣೆ 2.ಏ ಮಕ್ಕಳಿಗೆ ಮಾನಸಿಕ  ಆಪ್ತ ಸಮಾಲೋಚನಾ ಸೇವೆಗಳನ್ನು ಒದಗಿಸುವಿಕೆ
1.ಐ ಮಕ್ಕಳ ಸ್ನೇಹಿ ಗ್ರಂಥಾಲಯ ಸ್ಥಾಪನೆ ಮತ್ತು ಉತ್ತೇಜನ 2.ಐ ಮಕ್ಕಳಿಗೆ ಪೌರ ಶಿಕ್ಷಣ ಒದಗಿಸುವಿಕೆ
2.ಒ ಮಕ್ಕಳ ಗ್ರಾಮ ಸಭೆಗಳ ಆಯೋಜನೆಗೆ ಉತ್ತೇಜನ
2.ಓ ಅಲೆಮಾರಿ ಮಕ್ಕಳಿಗೆ ಶೈಕ್ಷಣಿಕ ಸಹಕಾರ
2.ಔ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ(ಆರ್ಥೀಕ ಕೋರತೆ,ವಸತಿ ಸೌಲಭ್ಯಗಳ ಕೊರತೆ ಇತ್ಯಾದಿಯಿಂದ) ಮಕ್ಕಳನ್ನು ಪುನಃ ಶಾಲೆಗೆ ಕರೆಯಲು ಸಹಕಾರ
2.ಅಂ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಪರಿಹಾರ ಮಾರ್ಗೋಪಾಯದ ಅನುಷ್ಠಾನ(ರಾಜ್ಯದ ಶೇ 30 ರಷ್ಟು ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಲ್ಲ)
  ಈ ಸ್ಪರ್ಧೆಯಲ್ಲಿ ಭಾಗವಹಿಸುವ ಯುವ ಸಂಘಗಳು ಮೇಲೆ ಉಲ್ಲೇಖಿಸಿರುವ ಪ್ರತಿ ವಿಭಾಗದಿಂದ ಕನಿಷ್ಠ ೆರಡು ಕಾರ್ಯಗಳನ್ನು ಆಯ್ಕೆ ಮಾಡಬೇಕು.ಅಂದರೆ,ಭಾಗವಹಿಸುವ ಪ್ರತಿ ಯುವ ಸಂಘವು ಒಟ್ಟು ನಾಲ್ಕು ಕಾರ್ಯಗಳನ್ನು (ವಿಭಾಗ ಒಂದರಿಂದ -2,ವಿಭಾಗ ಎರಡರಿಂದ-2)ಕೈಗೊಳ್ಳಬೇಕು. ಇದಕಿಂತ ಹೆಚ್ಚು ಆಯ್ಕೆ ಮಾಡಿದ ಕಾರಣಕ್ಕೆ ಹೆಚ್ಚು ಅಂಕಗಳು ಬರುವುದಿಲ್ಲ ಎಲ್ಲಾ ಕಾರ್ಯಗಳ ಪರಿಣಾಮಕಾರಿ ಫಲಶೃತಿಯನ್ನು ಅಂಕಗಳ ನೀಡುವಿಕೆಗೆ ಪರಿಗಣೀಸಲಾಗುವುದು.
Feedback