ಪಿಂಚಣಿ

ಮಾಜಿ ಕ್ರೀಡಾಪಟುಗಳಿಗೆ ಕುಸ್ತಿ ಮಾಸಾಶನ

ಕಷ್ಟದ ಪರಿಸ್ಥಿಯಲ್ಲಿರುವ ಕುಸ್ತಿ/ಕ್ರೀಡಾ ಪಟುಗಳಿಗೆ ಮಾಸಾಶನ ನೀಡುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ವಲಯದಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯಡಿ ಪ್ರಸ್ತುತ ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ರೂ 750/- ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ರೂ 1000/- ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ರೂ 1500/- ಗಳ ಮಾಸಾಶನವನ್ನು ನೀಡಲಾಗುತ್ತಿದೆ. ಮಾಸಾಶನಕ್ಕಾಗಿ ನಿಗದಿಗೊಳಿಸಲಾದ ಸಾಮಾನ್ಯ ಅರ್ಹತಾ ಷರತ್ತುಗಳು:
 • ಅರ್ಜಿದಾರರು ಕನಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು. ಈ ಮಿತಿಯನ್ನುಅರ್ಜಿದಾರರು ಕ್ರೀಡೆಯಲ್ಲಿ / ಕುಸ್ತಿಯಲ್ಲಿ ತೊಡಗಿದ್ದಾಗ ಅಂಗವಿಕಲತೆ ಹೊಂದಿದ್ದಲ್ಲಿ ದಾಖಲೆ ಆಧಾರಗಳ ಮೇಲೆ ಸಡಿಲಗೊಳಿಸಲಾಗುವುದು. ವಯಸ್ಸಿನ ದೃಢೀಕರಣವನ್ನು ಸರ್ಕಾರದ ಆರೋಗ್ಯ ಇಲಾಖೆ ಜಿಲ್ಲಾ ಸರ್ಜನ್ರವರು ಪರಿಶೀಲಿಸಿ ನೀಡಿರಬೇಕು.
 • ಧನ ಸಹಾಯವನ್ನು ಕರ್ನಾಟಕದಲ್ಲಿ ಹುಟ್ಟಿದವರಿಗೆ ಮಾತ್ರ ಅಥವಾ ಕರ್ನಾಟಕದಲ್ಲಿ 20 ವರ್ಷ ಮೇಲ್ಪಟ್ಟು ವಾಸಿಸುತ್ತಿರುವವರಿಗೆ ಮಾತ್ರ ನೀಡತಕ್ಕದ್ದು. ವಾಸದ ಬಗ್ಗೆ ಪ್ರಮಾಣ ಪತ್ರ ತತ್ಸಬಂಧ ತಹಶೀಲ್ದಾರರು ನೀಡಿರಬೇಕು.
 • ಅರ್ಜಿದಾರರು ವಾರ್ಷಿಕ ಆದಾಯ ಎಲ್ಲಾ ಮೂಲಗಳು ಸೇರಿ ರೂ 20,000/- ಗಳು ಮೀರಿರಬಾರದು. ಆದಾಯ ಪ್ರಮಾಣ ಪತ್ರ ತತ್ಸಬಂಧ ತಹಶೀಲ್ದಾರರು ನೀಡಿರಬೇಕು.
 • ಮಾಸಾಶನದ ಬೇರೆ ಯಾವುದೇ ಇಂತಹ ಧನ ಸಹಾಯ ಪಡೆಯುತ್ತಿರಬಾರದು. ವೃದ್ದಾಪ್ಯ ವೇತನ ಪಡೆಯುತ್ತಿದ್ದರೆ ಅರ್ಜಿದಾರರ ವಾರ್ಷಿಕ ಆದಾಯಕ್ಕೆ ಇದನ್ನು ಲೆಕ್ಕ ಹಾಕಬೇಕು ಮತ್ತು ಆದಾಯ ಮಿತಿ ರೂ 20,000/- ಮೀರಿರಬಾರದು.
 • ಧನ ಸಹಾಯಕ್ಕಾಗಿ ನಿಗಧಿತ ಅರ್ಜಿಯನ್ನು ತುಂಬಿ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅರ್ಜಿಗೆ ಲಗತ್ತಿಸಿ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬೇಕು. ಅರ್ಜಿದಾರರ ಜಿಲ್ಲೆಗೆ ಸಂಬಂಧಪಟ್ಟ ಸಹಾಯಕ ನಿರ್ದೇಶಕರುಗಳ ( ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ಮೂಲಕ ಸಲ್ಲಿಸಬೇಕು ಮತ್ತು ಸಹಾಯಕ ನಿರ್ದೇಶಕರುಗಳು(ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ತತ್ಸಬಂಧ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದರಿ ಅರ್ಜಿಗಳ ಅಂಶಗಳನ್ನು ಮತ್ತು ದಾಖಲೆಗಳನ್ನು ಸ್ಥಳೀಯ ವಿಚಾರಣೆಯಿಂದ ದೃಢೀಕರಿಸಿದ ನಂತರ ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರಿಗೆ ಮಾಸಾಶನ ಮಂಜೂರಾತಿಗಾಗಿ ಶಿಫಾರಸ್ಸು ಮಾಡಬೇಕು.
 • ಆಯಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಲು ಮತ್ತು ಧನ ಸಹಾಯಕ್ಕಾಗಿ (ಮಾಸಾಶನ) ಸರ್ಕಾರಕ್ಕೆ ಅವಶ್ಯಕ ಶಿಫಾರಸ್ಸು ಮಾಡಲು ಅಧಿಕಾರ ಹೊಂದಿರಬೇಕು.
 • ಒಂದು ವೇಳೆ ಅರ್ಜಿದಾರರು ಮಾನ್ಯತೆ ಪಡೆದ ಪಂದ್ಯಾವಳಿಗಳಲ್ಲಿ ಭಾಗವಹಿದ್ದಾಗ ಆಕಸ್ಮಿಕ ಘಟನೆಯಿಂದ ಶಾಶ್ವತವಾಗಿ ಅಸಮರ್ಥರಾದರೆ ಅಂಥವರಿಗೆ ಧನ ಸಹಾಯ ಮಂಜೂರು ಮಾಡಲು ಸರ್ಕಾರದ ಅನುಮೋದನೆಯನ್ನು ಪ್ರತಿಯೊಂದು ಅರ್ಜಿದಾರರ ವಿಷಯದ ಅರ್ಹತೆಗನುಗುಣವಾಗಿ ಪಡೆಯಬೇಕಾಗಿರುತ್ತದೆ.
 • ಅರ್ಜಿದಾರರು ಅವರ ಕ್ರೀಡಾ ಕ್ಷೇತ್ರದಲ್ಲಿ ನಿಜವಾಗಿಯೂ ನಿಪುಣರಾಗಿರಬೇಕು. ಅದಕ್ಕೆ ಆಧಾರವಾಗಿ ಕ್ರೀಡಾ ಪ್ರಮಾಣ ಪತ್ರಗಳನ್ನು ಮತ್ತು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬಡತನದಲ್ಲಿದ್ದಾರೆ ಎಂಬುದನ್ನು ವಿಚಾರಣೆ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿ ದೃಢೀಕರಿಸಿಕೊಳ್ಳಬೇಕು.
 • ಅರ್ಜಿದಾರರು ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿಯನ್ನು ಬಹಿರಂಗಗೊಳಿಸಬೇಕು.
 • ಶಿಫಾರಸ್ಸು ಆಗಿರುವ ಅರ್ಜಿಗಳನ್ನುಸ್ವೀಕರಿಸಿದ ನಂತರ ಸರ್ಕಾರದ ಪರಿಶೇಲನೆ ನಂತರ ಧನ ಸಹಾಯವನ್ನು ಮಂಜೂರು ಮಾಡಲಾಗುತ್ತದೆ.
 • ಅರ್ಜಿದಾರರು ಸತ್ಯಾಂಶಗಳನ್ನು ನೀಡುವಲ್ಲಿ ಮರೆಮಾಚಿರುವುದು ಅನಂತರ ಕಂಡು ಬಂದಲ್ಲಿ/ಗೊತ್ತಾದಲ್ಲಿ ಅಂಥವರ ಮಾಸಾಶನವನ್ನು ರದ್ದುಗೊಳಿಸುವುದರ ಜೊತೆಗೆ ಅವರಿಗೆ ಕೊಟ್ಟ ಧನ ಸಹಾಯ(ಮಾಸಾಶನ) ವನ್ನು ವಸೂಲು ಮಾಡುವ ಅಧಿಕಾರ ಹೊಂದಿರುತ್ತದೆ.
'Shri. Pramod Madhavaraj, Hon'ble Minister for Youth Empowerment and Sports & Fisheries Last Date for Submitting Online Applications Has Been Extended Till 15/10/2017


Feedback