ಯುವ ಸ್ಪಂದನ

ಯುವಜನರ ಅಭಿವೃದ್ಧಿ ಮತ್ತು ಸಬಲೀಕರಣದೊಂದಿಗೆ ಆಪ್ತ ಸಮಾಲೋಚನೆಯಂತಹ ಬೆಂಬಲ ಸೇವೆಗಳು

ಭಾರತೀಯ ಯುವಜನರ ಜನಸಂಖ್ಯೆಯು 30% ರಷ್ಟಿದ್ದು ಕರ್ನಾಟಕ ರಾಜ್ಯದ ಯುವಜನರ ಜನಸಂಖ್ಯೆ (2011 ರ ಸಮೀಕ್ಷೆಯ) ಯು 1.86 ಕೋಟಿ (ಒಟ್ಟು ಜನಸಂಖ್ಯೆ 34.6% ರಷ್ಟು 15-30 ರ ವಯಸ್ಸಿನವರು) ಮಾನವ ಅಭಿವೃದ್ಧಿ ವರದಿಯ 2012ರ ಪ್ರಕಾರ ಪ್ರಸ್ತುತ ಈಗಿನ ಯುವಜನರ ಜನಸಂಖ್ಯೆಯನ್ನು ಗಮನಿಸಲಾಗಿ ಮುಂದೆ 2050 ರಷ್ಟರಲ್ಲಿ  ವಯಸ್ಸಾದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರಿರುತ್ತಾರೆಂದು ಹೇಳಿದರೆ ತಪ್ಪಾಗಲಾರದು. ಪ್ರಥಮ ಬಾರಿಗೆ ಮನಕುಲದ ಇತಿಹಾಸದಲ್ಲೇ ಹೆಚ್ಚಿನ ಯುವಜನರನ್ನು ಹೊಂದಿದಲ್ಲಿ ಗೌರವಯುತವಾದ ಜೀರುವುದಕ್ಕೆ ನಾಂದಿಯಾಗುತ್ತದೆ. ಇಂದಿನ ಯುವಜನರ ಹಾಗೂ ಮುಂದೆ ಹುಟ್ಟಲಿರುವ ಯುವ ಪೀಳಿಗೆಯ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆಯು ಯುವಜನರನ್ನು ಬಲಪಡಿಸಲು ಹಾಗೂ ಯುವಜನರ ವಿಷಯಗಳಿಗೆ ಸಂಬಂಧಿಸಿದಂತೆ ಪೂರಕ ಸೇವೆಗಳನ್ನು ಒದಗಿಸಿ ದಾರಿ ದೀಪವಾಗಲಿದೆ.

ಇಂದಿನ ಪರಿಸ್ಥಿತಿಯಲ್ಲಿ ಯುವಜನರು ಸಮಾಜಿಕ, ಮನೋಸಮಾಜಿಕ, ವರ್ತನೆಯ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಸಮಾಜದಲ್ಲಿ ಗೌರವಯುತವಾದ ಜೀವನವನ್ನು ನಡೆಸಲು ಪ್ರಮುಖವಾಗಿ ಸಮಾಜಿಕ ಸಂಸ್ಥೆಗಳಾದ ಕುಟುಂಬ ಸಂಬಂಧಿಗಳು, ಗೆಳೆಯರು, ಶಿಕ್ಷಕರು, ಉದ್ಯೋಗಸ್ಥರು ಮುಂತಾದವರಂದಿಗೆ ಸಮಾಜಿಕ ಸವಾಲುಗಳನ್ನು ಎದುರಿಸಬೇಕಾದಲ್ಲಿ ದೈಹಿಕ ಆಕಾರದ ಗ್ರಹಿಕ ಹಾಗೂ ಪರಸ್ಪರ ಸಮಾಜಿಕ ಸಂಬಂಧಗಳು ಮತ್ತು ಸಮಾಜಿಕ ಸಂಸ್ಥೆಗಳು ವ್ಯಾಪಕವಾಗುತ್ತವೆ. ಮಾನಸಿಕ ಮತ್ತು ಮನೋಸಮಾಜಿಕ ಸವಾಲುಗಳನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅದು ಆತಂಕ, ಖಿನ್ನತೆಯಂತಹ ಹಾಗೂ ಸಂಬಂಧಾತ್ಮಕ ಸಮಸ್ಯೆಗಳಿಗೆ ಕಾರವಾಗಿ ಇಂತಹ ಮಾನಸಿಕ ಒತ್ತಡಗಳನ್ನು ನಿಭಾಯಿಸಲು ಯುವಜನರು ಮಾದಕ ವ್ಯಸನಿಗಳಂತಹ ಸಮಾಜಿಕ ಒತ್ತಡಗಳನ್ನು ನಿಭಾಯಿಸಲು ಯುವಜನರು ಮಾದಕ ವ್ಯಸನಿಗಂತಹ ಸಮಾಜಿಕ ಸಮಸ್ಯೆಗಳಿಗೆ ಬಲಿಯಾಗುವುದೆ, ದೈಹಿಕ ಮತ್ತು ಲೈಂಗಿಕ ಹಿಂಸೆಯ ಕೃತ್ಯಗಳಂತಹ ಚಟುವಟಿಕೆಗಳಲ್ಲಿ ತೊಡಗುವರು ಒಟ್ಟಾರೆ ಯುವಜನರ ಶಿಕ್ಷಣ ಅಥವಾ ವೃತ್ತಿ, ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಮಾನಸಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮಬೀರುತ್ತದೆ.

ಇಂದಿನ ಭಾರತಿಯ ಯುವಜನರು ಬದಲಾಗುತ್ತಿರುವ ಜಾಗತೀಕರಣ ಹಾಗೂ ಸಂವಹನದಂತಹ ಸಮೂಹ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿಯ ದೃಷ್ಟಿಕೋನವು ನಿಧಾನವಾಗಿ ಪರಿವರ್ತನೆಗೊಳ್ಳುತ್ತಿದೆ. ಇವೆಲ್ಲವು ಯುವಜನರ ಗೃಹಿಕೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ಜೀವನದ ಮೇಲೆ ಪರಿಣಾಮವನ್ನು ಹೊಂದಿವೆ. ಈ ಸಂಸ್ಕೃತಿಯ ಪರಿವರ್ತನೆಯು ಸವಾಲಾಗಿದ್ದು ಕುಟುಂಬದೊಂದಿಗೆ ಯುವಜನರನ್ನು ಸಂಘರ್ಷಕ್ಕಿಡುಮಾತ್ತಿವೆ. ಸಂಸ್ಕ್ಋತಿಯ ಪರಿವರ್ತನೆಯ ಪರಿಣಾಮ ಕುಟುಂಬ ಹಾಗೂ ಯುವಜನರಲ್ಲಿಯೂ ಸಂಬಂಧದಲ್ಲಿಯ ತ್ವರಿತಗತಿಯ ಬದಲಾವಣೆಯೊಂದಿಗೆ ಭಾರವಜನತೀಯ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿ ಬೇಕಾದರೆ ಯುವಜನರನ್ನು ಸೂಕ್ಷ್ಮವಾಗಿ ಸಜ್ಜುಗೊಳಿಸಬೇಕಾಗಿದೆ. ಕುಟುಂಬ ಹಾಗೂ ಯುವಜನರ ಮದ್ಯ ಬೆಳವಣಿಗೆ ಅಡ್ಡಿಯನ್ನುಂಟುಮಾಡುವ, ಹಾಗೂ ಯುವಜನರ ಅವಶ್ಯಕತೆಗಳನ್ನುರಿತು ಅದಕ್ಕಾಗಿ ಪೋಷಕರು ತಮ್ಮ ಬಾಲ್ಯಾವಸ್ಥೆಯ ಜೀವನ, ಅನುಭವ, ಸಮಾಜಿಕ ಸಂಸ್ಕೃತಿಗಳ ಬಗ್ಗೆ ತಿಳಿಸಿ ಯುವಜನರನ್ನು ಪ್ರಭಾವಿತಗೊಳಿಸಬೇಕಾಗಿದೆ. ಕೆಲವು ಕುಟುಂಬಗಳು ಇಂತಹ ಸವಾಲುಗಳನ್ನು ಚೆನ್ನಾಗಿ ನಿಭಾಯಿಸುತ್ತವೆ ಆದರೆ ಕುಟುಂಬಗಳು ಯುವಜನರ ಇಂತಹ ಪರಿಸ್ಥಿಗಳಲ್ಲಿ ಮತ್ತು ಸಂಘರ್ಷಗಳಲ್ಲಿ ಭಿನ್ನಾಭಿಪ್ರಾಯ ನಿರ್ವಹಿಸಲು ಸವಾಲೇನಿಸಬಹುದು ಸಾಮಾನ್ಯವಾಗಿ ಯುವಜನರ ಮತ್ತು ಅವರ ಕುಟುಂಬದ ನಡುವಿನ ಸಂಬಂಧದ ಸಮಸ್ಯಗಳಿಗೆ ಕಾರಣವಾಗುತ್ತದೆ. ಇಂತಹ ದೀರ್ಘ ಸಂಘರ್ಷಗಳಿಂದ ಯುವಜನರು ಸಮಾಜ ವಿರೋಧಿಯಾಗುವ ಸಾಧ್ಯತೆಯಿದೆ. ಯುವಜನರ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಂಡಾಗ ಸಂದಿಗ್ದ ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಸುಲಭವಾಗುವುದು.

ಭಾರತ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ಬೆಂಬಲ ಸೇವೆಗಳನ್ನು ಸ್ಥಾಪಿಸುತಂತಹ ಪ್ರಯತ್ನಗಳು ನಡೆದಿವೆ. ಆದಾಗ್ಯೂ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗಿಡದ ಬದಲಾಗಿ ಸಮಾಜಿಕ, ಮಾನಸಿಕ, ವರ್ತನೆ ಮತ್ತು ಆರೋಗ್ಯಕ್ಕೆ ಕೇಂದ್ರೀಕರಿಸುವುದಲ್ಲದೆ ಅಸ್ವಸ್ಥೆಯನ್ನು ತಡೆಗಟ್ಟುವಲ್ಲಿ ಕೇಂದ್ರೀಕರಿಸುವುದಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರಿಕರಿಸದೆ ಯುವಜನರ ಮಾರ್ಗದರ್ಶನ ಕೇಂದ್ರಗಳಂತಹ ಬೆಂಬಲ ಸೇವೆಗಳ ಅಭಿವೃದ್ಧಿಗೆ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಯುವಜನರನ್ನು ಕೇಂದ್ರಿತವಾಗಿಟ್ಟುಕೊಂಡು ಯುವಜನರ ಸಮಾಜಿಕ, ಮಾನಸಿಕ, ವರ್ತನೆ ಮತ್ತು ಆರೋಗ್ಯ ಅಭಿವೃದ್ಧಿಗಾಗಿ ಬೆಂಬಲ ಸೇವೆಗಳನ್ನು ಉತ್ತೇಜಿಸುವುದರೊಂದಿಗೆ ಕುಟುಂಬಳ ಸುರಕ್ಷಿತ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಾಗಿದೆ.

ಈ ಬೆಂಬಲ ಸೇವೆಗಳಿಂದ ಯುವಜನರು ಎದುರುತ್ತಿಸುತ್ತಿರುವ ಪ್ರಮುಖ ಸಮಸ್ಯಗಳಲ್ಲಿ ಆತ್ಮಹತ್ಯೆಯಾಗಿದ್ದು, ಎಕಾಗ್ರತೆಯಂತಹ ಸಣ್ಣ ಸಮಸ್ಯೆಗಳನ್ನು ಸುಲಭವಾಗಿ ಕೈಗೆತ್ತಿಕೊಳ್ಳಬಹುದು. ಬೆಂಬಲ ಸೇವೆಗಳಿಂದ ಯುವಜನರ ಮಾನಸಿಕ ಆರೋಗ್ಯದ ಬದಲಿಗೆ ಹದಿಹರೆಯದ ಸಮಸ್ಯಗಳ ಅಧ್ಯಯನ ಒಳಗೊಂಡಂತೆ ಎಲ್ಲಾ ಸಮಸ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿ ಅವರ ಯಶಸ್ಸು ಏಳಿಗಾಗಿ ಸೌಲಭ್ಯಗಳನ್ನು ಒದಗಿಸಿ ಯುವಜನರನ್ನು ಸ್ವಾಲಂಬಿಯಾಗಿ ಮಾಡುವುದು. ಯುವಜನರಿಗೆ ಬೆಂಬಲ ಸೇವೆಗಳನ್ನು ನೀಡಿ ಅವರಲ್ಲಿರುವ ಸ್ವ ಸಾಮಥ್ಯವನ್ನು ಪ್ರೋತ್ಸಹಿಸಿ ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿರುವ ಯುವಜನರಿಗೆ ಸಹಾಯ ನೀಡುವುದು. ಯುವಜನರು ಸಮಸ್ಯಗಳ ಒತ್ತಡದಿಂದ ಹೊರಬಂದು, ವಿಶಾಲ ಮನೋಭಾವನೆಯುಳ್ಳವರಾಗಿ ಸಂದಿಗ್ಧ ಪರಿಸ್ಥಿತಿಗೆ ವೃತ್ತಿ ನೆರವು ನೀಡುವುದು.

ಇಂದು ಯುವಜನರು ಸಂದಿಗ್ಧ ಪರಿಸ್ಥಿಯಲ್ಲಿ ಬಳಲುವುದು ಗಮನಾರ್ಹ ಸಮಸ್ಯೆಯಾಗಿದ್ದು, ಅವರ ವ್ಯಕ್ತಿತ್ವ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನ ನೀಡಲು ಸಹಾಯಕವಾಗುವ ದೃಷ್ಟಿ ಕೋನವನ್ನಿಟ್ಟುಕೊಂಡು ಮನೋವಿಜ್ಞಾನ ತಜ್ಞರಿಂದ ಕೌಶಲ್ಯ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಮಾರ್ಗದರ್ಶನ ಕೇಂದ್ರಗಳಲ್ಲಿ ನಡೆಯುವುದೇನು ?

ಮಾರ್ಗರ್ದರ್ಶನ ಕೇಂದ್ರಗಳನ್ನು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಸ್ಥಾಪಿಸಲಾಗುತ್ತವೆ. ಆರಂಭದಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 5-10 ಜನ ಶಿಕ್ಷಕ ತರಬೇತುದಾರರನ್ನು ಆಯಾ ಜಿಲ್ಲೆಯ ಶಾಲೆ ಅಥವಾ ಕ್ರೀಡಾಂಗಣದಲ್ಲಿ ಯುವಜನರ ವಿಷಯಗಳಿಗೆ ತರಬೇತಿಗೊಳೊಸುವುದು, ಪ್ರತಿ ವರ್ಷ ಶಿಕ್ಷಕ ತರಬೇತುದಾರರೊಂದಿಗೆ 20 ಜನ ಸಮಾಜ ವಯಸ್ಕ ಸಮೀಪವರ್ತಿಗಳಿಗೆ ಅರ್ಹತಾ ಮಾನದಂಡಗಳಿಗನುಗುಣವಾಗಿ ತರಬೇತಿಯನ್ನು ನೀಡುವುದು. ಈ ಶಿಕ್ಷಕ ತರಬೇತುದಾರರು ಹಾಗೂ ಸಮಾನ್ಯ ವಯಸ್ಕ ಸಮೀಪರ್ವತಿಗಳು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯುವಜನರ ವಿಷಯಗಳನ್ನು ನಿಭಾಯಿಸುವುದು. ಮಾರ್ಗದರ್ಶನ ಕೇಂಧ್ರದ ಚಟುವಟಿಕೆಗಳನ್ನು ಸಮುದಾಯದಲ್ಲಿ ವಿಸ್ತರಿಸುವುದು, ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಂಪನ್ಮೂಲ ಕ್ರೂಡೀಕರಣ ಮಾಡುವುದರೊಂದಿಗೆ ಸಂಪರ್ಕ ಸಂಸ್ಥೆಗಳನ್ನು  ಗುರುತಿಸುವುದು, ಬೆಂಬಲ ಸೇವೆಗಳನ್ನು ಯುವಜನರಿಗೆ ಒದಗಿಸುವುದು.

ಮಾರ್ಗದರ್ಶನ ಕೇಂಧ್ರದೊಳಗೆ ಕೆಲಸ ಮಾಡುತ್ತಿರುವ ಶಿಕ್ಷಕ ತರಬೇತುದಾರರು ಯೋಜನೆಯ ಉಲ್ಲೇಖಿತ ವಿಧಾನದ ಕ್ರಮಾವಳಿಗಳಂತೆ ಬೆಂಬಲ ಸೇವೆಗಳನ್ನು ಆಯೋಜಿಸುತ್ತಿರಬೇಕು.

ಮಾರ್ಗದರ್ಶನ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯ ಗತಿ ನಕ್ಷೆ ಈ ಕೆಳಗಿನಂತಿದೆ.

  1. ಯೋಜನೆಯ ಆಯವ್ಯಯದಲ್ಲಿ ಐದು ವರ್ಷಗಳ ನಂತರ ಕನಿಷ್ಠ 3750 ಶಿಕ್ಷಕ ತರಬೇತುದಾರಿರುತ್ತಾರೆ.
  2. 5 ವರ್ಷಗಳ ಕಾಲಾವಧಿಯಲ್ಲಿ 75000 ತರಬೇತಿ ಹೊಂದಿದ ಯುವ ಮಿತ್ರರು ಕರ್ನಾಟಕ ರಾಜ್ಯದಲ್ಲಿ ಇರುತ್ತಾರೆ.

Download Report April 2015

Feedback