ಯುವ ಶಕ್ತಿ ಕೇಂದ್ರ

ಯುವ ಶಕ್ತಿ ಕೇಂದ್ರ’ ಯೋಜನೆಯ ಮಾರ್ಗಸೂಚಿಗಳು: 1.ಪ್ರಸ್ತಾವನೆ: ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯದಲ್ಲಿ ಉಂಟಾದ ಅಭಿವೃದ್ಧಿಯ ಪ್ರಭಾವದಿಂದಾಗಿ ಕರ್ನಾಟಕದ ಅರ್ಥಿಕ ಪ್ರಗತಿ ಉನ್ನತ ಮಟ್ಟಕ್ಕೆರಿದ್ದು ಯುವ ಕನ್ನಡಿಗರ ವೃತ್ತಿ ರಂಗದಲ್ಲಿ ಸಾಗರೋಪಾದಿಯಲ್ಲಿ ಬದಲಾವಣೆಗಳು ಆಗಿದೆ ಶೈಕ್ಷಣಿಕ ರಂಗವು ಸಹ ಸ್ಪರ್ಧಾತ್ಮಕವಾಗಿದ್ದು, ಯುವ ವಿದ್ಯಾರ್ಥಿ/ ವಿದ್ಯಾರ್ಥಿನಿಲಯರು ಪರಿಕ್ಷೇಯಲ್ಲಿ  ಗಳಿಸುವ ಅಂಕಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದು ಪಠ್ಯೇತರ ಚಟುವಟಿಗಳಲ್ಲಿ ಪ್ರಮುಖವಾಗಿ ಮನೋ-ದೈಹಿಕ ಅರೋಗ್ಯಕ್ಕೆ ಪೂರಕವಾದ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವೃತ್ತಿ/ಶಿಕ್ಷಣ ಆಧಾರಿತ ಆರೋಗ್ಯ ದುಷ್ಟರಿಣಾಮಗಳಾದ ಬೊಜ್ಜು, ಒತ್ತಡ ಸಂಬಂಧಿ ಸಮಸ್ಯೆಗಳು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗಳಲ್ಲಿ ಕೂಡ ಹೊಚ್ಚಳವಾಗಿದೆ. ಬಹಳಷ್ಟು ವೃತ್ತಿಗಳಲ್ಲಿ ದೈಹಿಕ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳಲು ಫಿಟ್ನೆಸ್ ಕೇಂದ್ರಗಳು ಇಲ್ಲಿದಿರುವುದರಿಂದ ಈ ಸಮಸ್ಯೆ ಗಂಭೀರವಾಗುತ್ತಿದೆ. ಈ ಹಿಂದೆ ಪ್ರತಿ ನಗರ/ಗ್ರಾಮದಲ್ಲಿ ಒಂದಕ್ಕಿತ ಹೆಚ್ಚು ಗರಡಿ ಮನೆಗಳಿದ್ದು, ಅಲ್ಲಿ ಮಕ್ಕಳು, ಯುವಜನರು ಮತ್ತು ವಯಸ್ಕರು ದೈಹಿಕ ವ್ಯಾಯಾಮ ಚಟುವಟಿಕೆಗಳಲ್ಲಿ ನಿರತರಾಗುವುದು ಜೀವನ ಶೈಲಿಯಾಗಿತ್ತು. ಆರ್ಥಿಕ  ಬೆಳೆವಣಿಗೆಯಿಂದಾಗಿ ಮಹಿಳೆಯರೂ ಸಹ ವಿವಿಧ ವೃತ್ತಿಗಳಲ್ಲಿ ಭಾಗಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೌಟುಂಬಿಕ ಆದಾಯ ಗಳಿಕೆಯಲ್ಲಿ ಬೆಂಬಲ ನೀಡುವುದರ ಜೋತೆಗೆ ವ್ಯಾಪಾರ ಕ್ಷೇತ್ರ,  ಔದ್ಯಮಿಕ ಕ್ಷೇತ್ರಗಳಲ್ಲೂ ಸಹ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವ ವಿಸ್ಯಾರ್ಥಿನಿ/ ಮಹಿಳೆಯರಲ್ಲೂ ಸಹ ದೈಹಿಕ ಾರೋಗ್ಯದ ಬಗ್ಗೆ ಅರಿವು ಮೂಡಿಸಿ ಪ್ರಾರಂಭದಿಂದಲೇ ದೈಹಿಕ ಸಾಮರ್ಥ್ಯವನ್ನು ಬೆಳೆಸಿ ಸಶಕ್ತರನ್ನಾಗಿಸಲು ತರಬೇತಿ ಅವಕಾಶ ಕಲ್ಪಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ 2014-15 ನೇ ಸಾಲಿನಿಂದ ‘ಯುವಶಕ್ತಿ ಕೇಂದ್ರ’ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
 1. ಉದ್ದೇಶಗಳು:
ಯುವಜನರು ಅದರಲ್ಲೂ ಯುವ ಮಹಿಳೆಯರು ಮನೋ-ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಅನುವಾಗುವಂತೆ ಮೂಲ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯಡಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು ‘ಯುವಶಕ್ತಿ ಕೇಂದ್ರ’- ಜಿಮ್, ಭಾರ ಎತ್ತುವ ಉಪಕರಣಗಳು, ಕ್ರಾಸ್ ಟ್ರೇನರ್ಸ್, ಸೈಕಲ್ಸ್ ಇತ್ಯಾದಿ ದೇಹದಾರ್ಢ್ಯ ಸಾಮಗ್ರಿಗಳನ್ನೊಳಗೊಂಡ ಮೂಲ ಸೌಕರ್ಯವನ್ನು ಹೋಂದಿದ ಕೇಂದ್ರವನ್ನು ಸ್ಥಾಪಿಸುವುದು. ಯುವಶಕ್ತಿ ಕೇಂದ್ರವನ್ನು ಈ ಕೆಳಕಾಣಿಸಿದ ನಿಬಂಧನೆಗಳನ್ನು ಪೂರೈಸುವ ಸ್ಥಳದಲ್ಲಿ ಸ್ಥಾಪಿಸಲಾಗುವುದು.
 • ಜಿಲ್ಲಾ ಕೇಂದ್ರದಲ್ಲಿರುವ ಪ್ರಥಮ ದರ್ಜೆ ಸರ್ಕಾರಿ ಕಾಲೇಜನ್ನು ಆಯ್ಕೆ ಮಾಡುವುದು.
 • ಕಾಲ್ಲೇಜಿ/ಶಿಕ್ಷಣ ಸಂಸ್ಥೆಯಲ್ಲಿ Co-education ಸೌಲಭ್ಯವಿರಬೇಕು.
 • ಕಾಲೇಜಿನಲ್ಲಿ 1000 ಕ್ಕೂ ಹೆಚ್ಚು ಯುವಕ/ಯುವತಿಯರು  ವ್ಯಾಸಂಗ ಮಾಡುತ್ತಿರಬೇಕು
 • ಸದರಿ ಕಾಲೇಜಿನಲ್ಲಿ ಓರ್ವ ದೈಹಿಕ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿರಬೇಕು.
 • ಯುವ/ಯುವತಿಯರಿಗೆ ಪ್ರತ್ಯೇಕ ವೇಳೆಗಳಲ್ಲಿ ಕೇಂದ್ರದ ಸೌಲಭ್ಯ ಪಡೆಯಲು ಅವಕಾಶ ಮುಕ್ತವಾಗಿರಿಸಬೇಕು.
 • ಯುವಶಕ್ತಿ ಕೇಂದ್ರಕ್ಕೆ ಆರಂಭಿಸಲು 25 ಅಡಿ X 25 ಅಡಿ ಅಳತೆಯ ಕೊಠಡಿ ಇರಬೇಕು.
 • ಸದದರಿ ಕೊಠಡಿಯನ್ನು ಕೇಂದ್ರಕ್ಕೆ ಅನುಕೂಲವಾಗುವಂತೆ ಒಳ ವಿನ್ಯಾಸ ಮಾಡಲು ಮುಕ್ತ ಅವಕಾಶ ನೀಡಬೇಕು.
 • ಕೇಂದ್ರದ ಹೊರಗಡೆ ಕರ್ನಾಟಕ ಸರ್ಕಾರದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಶಕ್ತಿ ಕೇಂದ್ರ ಎಂದು ಫಲಕ ಹಾಕಲು ಅನುಮತಿ ನೀಡಬೇಕು.
 • ಸದರಿ ಕೇಂದ್ರ ನಿರ್ವಹಣೆಗೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಕಾಲೇಜು ಭರಿಸಲು ಸಿದ್ಧವಾಗಿರಬೇಕು.
 • ಪ್ರಾಯೋಗಿಕವಾಗಿ ಪ್ರಥಮ ಹಂತದಲ್ಲಿ 15 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು ಮುಂಬರುವ ಸಾಲುಗಳಲ್ಲಿ ಹಂತ ಹಂತವಾಗಿ ಎಲ್ಲೆಡೆ ಯುವಶಕ್ತಿ ಕೇಂದ್ರಗಳನ್ನು ಆರಂಭಿಸಲಾಗುದು.
 • ಯುವ ಶಕ್ತಿ ಕೇಂದ್ರದ ದೈನಂದಿನ ನಿರ್ವಹಣೆಯ ಮೇಲುಸ್ತುವಾರಿಗಾಗಿ ಕೆಳಕಾಣಿಸಿದ ಸದಸ್ಯರನ್ನೊಳಗೊಂಡ ಸಮಿತಿಯು ಕಾರ್ಯನಿರ್ವಹಿಸುವುದು.
ಪ್ರಾಂಶುಪಾಲರು                – ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಉಪ/ಸಹಾಯಕ ನಿರ್ದೇಶಕರು – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ದೈಹಿಕ ನಿರ್ದೇಶಕರು            -ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
 1. ಘಟಕ ವೆಚ್ಚ:
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಯುವ ಶಕ್ತಿ  ಕೇಂದ್ರವನ್ನು ರೂ. 15.00 ಲಕ್ಷಗಳ ವೆಚ್ಚದಲ್ಲಿ ಆರಂಭಿಸಲಾಗುವುದು.
 1. ಫಲಿತಾಂಶಗಳು
 • ಯುವಜನರಲ್ಲಿ ಆರೋಗ್ಯದ ಕುರಿತು ಹೆಚ್ಚಿನ ಅರಿವು.
 • ಯುವಜನರು ಮನೋ-ದೈಹಿಕ ಆರೋಗ್ಯದಲ್ಲಿ ವೃದ್ಧಿ.
 • ಯುವ ಮಹಿಲೆಯರ ಆತ್ಮವಿಶ್ವಾಸದಲ್ಲಿ ಹೆಚ್ಚಳ
 • ಬಿಡುವಿನ ವೇಳೆಯಲ್ಲಿ ಯುವಜನರು ಒಂದೆಡೆ ಸೇರಿ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ
 • ಯುವಜನರಿಂದ ದೈಹಿಕ ಚಟುವಟಿಕೆ ಮತ್ತು ಆಟೋಟಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ.
 • ಯುವಜನರನ್ನು ಮಾದಕ ವ್ಯಸನಗಳಿಂದ ಮತ್ತು ಸಮಾಜ-ವಿರೋಧಿ ಚಟುವಟಿಕೆಗಳಿಂದ ದೂರವಿರಿಸಲು ಸಹಾಕರಿ.
 • ಯುವಜನರು ಕಾರ್ಯಕ್ಷಮತೆಯಲ್ಲಿ ಗಣನೀಯ ವೃದ್ಧಿ.
 • ಆರೋಗ್ಯವಂತ ಕುಟುಂಬ/ಸಮಾಜ ನಿರ್ಮಾಣದಲ್ಲಿ ಯುವಜನರು ಹೆಚ್ಚಿನ ಪಾಲ್ಗೊಳ್ಳುವಿಕೆ.
 
Feedback