ಯುವ ತರಬೇತಿ

ಯುವಜನರಿಗಾಗಿ ಜೀವನದ ವಿವಿಧ ಆಯಾಮಗಳಲ್ಲಿ ಯಶಸ್ವಿಯಾಗಲು ತರಬೇತಿ ಶಿಬಿರಗಳನ್ನು ನಡೆಸಲಾಗುವುದು. ಯುವ ಚೇತನ : ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ನಾಯಕತ್ವ ಗುಣಗಳ ಬಗ್ಗೆ ಅರಿವು ಮೂಡಿಸುವ ತರಭೆತಿ ಕಾರ್ಯಕ್ರಮ. ಯುವ ಪ್ರೇರಣ: ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ತರಬೇಥಿ ಕಾರ್ಯಕ್ರಮ. ಯುವ ಸಂವಹನ:  ಯುವಜನತೆಗೆ ಇತರರೊಂದಿಗೆ ವ್ಯವಹರಿಸಲು ಮತ್ತು ಭಾವನೆಗಳ ಅಭಿವ್ಯಕ್ತಿಗೆ ಹಾಗೂ ಯಶಸ್ವಿ ನಾಯಕತ್ವಕ್ಕಾಗಿ ಸಂವಹನ ಬಹುಮುಖ್ಯ ಮಾಧ್ಯಮವಾಗಿದ್ದು, ಅದಕ್ಕಾಗಿ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತರಬೇತಿ ಶಿಬಿರ. ಈ ತರಬೇತಿಗಳನ್ನು ಆಯಾ ರಂಗಗಳಲ್ಲಿ ಅನುಭವ ಪಡೆದಿರುವ ಸಂಪನ್ಮೂಲ ವ್ಯಕ್ತಿಗಳಿಂದ ವೈಜ್ಞಾನಿಕ ಕ್ರಮದಲ್ಲಿ ನಡೆಸಲಾಗುವುದು. 16 ರಿಂದ 30 ವರ್ಷಗಳ ವಯೋಮಿತಿಯಲ್ಲಿನ ಎಲ್ಲಾ ಸ್ತರಗಳ ಯುವಜನರು (ಯುವಕ/ಯುವತಿ) ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಯುವತಿಯರಿಗೆ  ಮತ್ತು ಯುವಕರಿಗೆ ಪ್ರತ್ಯೇಕವಾಗಿ 7 ರಿಂದ 10 ದಿನಗಳ ಅವಧಿಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿರುತ್ತದೆ. ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಜೊತೆಗೆ ತರಬೇತಿ ಬಂದು ಹೋಗುವ ಸಾಂನ್ಯ ಬಸ್ ದರವನ್ನು ಪ್ರಯಾಣಭತ್ಯೆಯಾಗಿ ನೀಡಲಾಗುವುದು. ತರಬೇತಿ ಸ್ಥಳ:  ಯುವಜನ ತರಬೇಥಿ ಕೇಂದ್ರ, ಕುಂಬಳಘೋಡು, ಕೆಂಗೇರಿ, ಬೆಂಗಳೂರು ಮತ್ತು ಜನಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇಥಿ ಕೇಂದ್ರ, ವಿದ್ಯಾನಗರ, ಬೆಂಗಳೂರು. ಯುವಜನರಿಗೆ ಇಂದಿನ ಕಾಲಮಾನಕ್ಕೆ ತಕ್ಕಂತಹ ಆಧುನಿಕ ತಂತ್ರಜ್ಞಾನಗಳಲ್ಲಿ ಮತ್ತು ಕೌಶಲ್ಯಗಳಲ್ಲಿ ಪರಿಣತಿ ಪಡೆಯಲು ವಿಷಯತಜ್ಞರಿಂದ ತರಬೇತಿ ಶಿಬಿರಗಳನ್ನು ಬೆಂಗಳೂರಿನ ರಾಜ್ಯ ಯುವ ಕೇಂದ್ರದಲ್ಲಿ ನಡೆಸಲಾಗುತ್ತದೆ. ಛಾಯಾಚಿತ್ರಣ ತರಬೇತಿ, ವೀಡಿಯೋ ಚಿತ್ರಣ ತರಬೇತಿ, ಬ್ಯೂಟೀಷಿಯನ್ ತರಬೇತಿ, ಅಭಿನಯ ತರಬೇತಿ, ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ, ಕರಕುಶಲ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ  ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. 16 ರಿಂದ 30 ವರ್ಷದ ಯುವಕ/ಯುವತಿಯರಿಗೆ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದ್ದು, ತರಬೇತಿ ಪಡೆದವಗರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅಳಿವಿನ ಅಂಚಿನಲ್ಲಿರುವ ಜಾನಪದ ನೃತ್ಯ ರೂಪಕ ಮತ್ತು ಶಾಸ್ತ್ರೀಯ ನೃತ್ಯ ರೂಪಕ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು.
Feedback