ಯುವಜನ ಮೇಳಾ ಮತ್ತು ಯುವಜನೋತ್ಸವ

ಯುವಜನರಲ್ಲಿ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಪ್ರತಿ ವರ್ಷ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಯುವ ಉತ್ಸವಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಯುವಜನರಿಗಾಗಿ ಶಾಸ್ತ್ರೀಯ ಸಂಗೀತ (ಕನರ್ಾಟಕ ಮತ್ತು ಹಿಂದುಸ್ತಾನಿ) ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಲಘು ವಾದ್ಯ, ಲಘು ವಾದ್ಯ, ಜಾನಪದ ಗೀತೆ, ಜಾನಪದ ನೃತ್ಯ, ಏಕಾಂಕ ನಾಟಕ ಹಾಗೂ ಚಚರ್ಾ ಸ್ಪಧರ್ೆಗಳನ್ನು ಏರ್ಪಡಿಸಲಾಗುವುದು.

ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಕೇಂದ್ರ ಸಕರ್ಾರವು ಪ್ರತಿ ವರ್ಷ ಜನವರಿ ಮಾಹೆಯಲ್ಲಿ ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿಭಾನ್ವಿತ ಯುವಜನರು 18 ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸುತ್ತಾರೆ. ಈ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಕನರ್ಾಟಕ ರಾಜ್ಯದಿಂದ ಯುವ ತಂಡವನ್ನು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಯುವಜನೋತ್ಸವಗಳಲ್ಲಿ ಸ್ಪಧರ್ೆಗಳನ್ನು ಆಯೋಜಿಸಿ ಆಯ್ಕೆ ಮಾಡಿ ನಿಯೋಜಿಸಲಾಗುವುದು.

ಭಾರತದ ಘನತೆವೆತ್ತ ಮಾಜಿ ರಾಷ್ಟ್ರಪತಿಗಳಾದ ಶ್ರೀ.ಎ.ಪಿ.ಜೆ. ಅಬ್ದುಲ್ ಕಲಾಂ ಇವರ ಕನಸಿನ ಭಾರತ ಸಂದೇಶವನ್ನು ರಾಜ್ಯದ ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶದಿಂದ ಮತ್ತು ಯುವಜನರನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಯುವಜನ ಸಮ್ಮೇಳನಗಳು, ಕಾಯರ್ಾಗಾರಗಳು ಮತ್ತು ಯುವ ತರಬೇತಿ ಶಿಬಿರಗಳನ್ನು ನಡೆಸಲು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಯುವಜನರನ್ನು ಹೆಚ್ಚು ಕ್ರೀಯಾಶೀಲರನ್ನಾಗಿಸುವ ದೃಷ್ಠಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಯುವಜನ ಸಮ್ಮೇಳನಗಳು, ಕಾಯರ್ಾಗಾರಗಳು, ಯುವ ತರಬೇತಿ ಶಿಬಿರಗಳನ್ನು ಹಾಗೂ ಜಿಲ್ಲಾ ಯುವ ಪ್ರಶಸ್ತಿಗಳನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ 15 ರಿಂದ 35 ವರ್ಷದೊಳಗಿನ ಪ್ರತಿಭಾನ್ವಿತ ಯುವಜನರಿಗಾಗಿ ಸಮ್ಮೇಳನ, ಕಾಯರ್ಾಗಾರ, ಹಾಗೂ ತರಬೇತಿ ಶಿಬಿರಗಳನ್ನು ನಡೆಸಲಾಗುವುದು.

ರಾಜ್ಯ ಯುವ ಪ್ರಶಸ್ತಿಗಳು

ಸಮಾಜದ ವಿವಿಧ ಕ್ಷೇತ್ರಗಳಾದ ಸಮಾಜ ಸೇವೆ: ರಾಷ್ಟ್ರೀಯ ಭಾವೈಕ್ಯತೆ: ಕ್ರೀಡೆ: ಸಾಕ್ಷರತೆ: ಆರೋಗ್ಯ: ತರಬೇತಿ: ಪರಿಸರ: ಶ್ರಮದಾನ ಶಿಬಿರ: ಸಾಂಸ್ಕೃತಿಕ: ಇತರೆ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಯುವಕ/ಯುವತಿಯರನ್ನು ಮತ್ತು ಯುವಕ/ಯುವತಿ ಸಂಘಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ರಾಜ್ಯ ಮಟ್ಟದಲ್ಲಿ 10 ವೈಯಕ್ತಿಕ ಪ್ರಶಸ್ತಿಗಳಿಗೆ ತಲಾ ರೂ.10,000/-ಗಳಂತೆ ಹಾಗೂ 2 ಸಾಂಘಿಕ ಪ್ರಶಸ್ತಿಗಳಿಗೆ ತಲಾ ರೂ.25,000/-ಗಳಂತೆ ನೀಡಿ ಗೌರವಿಸಲಾಗುವುದು.

Feedback